April 23, 2024

Bhavana Tv

Its Your Channel

ಪ್ರಗತಿ ಪರ ಕೃಷಿಕ,ಪರಿಸರ ಪ್ರೇಮಿ, ಪತ್ರಕರ್ತ ಬಿ.ಜಿ ಹೆಗಡೆ ಗೇರಾಳ ನಿಧನ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸರಳ-ಸಜ್ಜನ ಹಾಗೂ ಸಹೃದಯಿ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡ ಭಾಸ್ಕರ ಗಣೇಶ ಹೆಗಡೆ(68) (ಬಿ.ಜಿ.ಹೆಗಡೆ ಗೇರಾಳ) ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಅವರು ಸೋಂದಾ ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಸದಸ್ಯರಾಗಿ, ಶ್ರೀ ಮಠದ ಸಪ್ತಪದಿ ಸಂಸ್ಥೆಯ ಅಧ್ಯಕ್ಷರಾಗಿ, ಶಿರಸಿ ಟಿ.ಎಸ್.ಎಸ್.ಸಂಸ್ಥೆಯ ಸ್ಥಳಿಯ ನಿರ್ದೇಶಕರಾಗಿ, ಯಲ್ಲಾಪುರದ ಮಲೆನಾಡು ಕೃಷಿ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿ, ಆನಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ, ಆನಗೋಡ ಮತ್ತು ಕಣ್ಣೀಗೇರಿಯ ಹಾಲು ಉತ್ಪಾದಕ ಸಹಕಾರಿ ಸಂಘದ ಸಂಸ್ಥಾಪಕರಾಗಿ, ಅಡಿಕೆ ವ್ಯವಹಾರಸ್ಥರಾಗಿ, ಉಮ್ಮಚಗಿಯ ಶ್ರೀಮಾತಾ ಸೌಹಾರ್ದ ಸಹಕಾರಿಯ ಯಲ್ಲಾಪುರ ಶಾಖೆಯ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಅಲ್ಲದೇ ಅನೇಕ ವರ್ಷಗಳ ಕಾಲ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದ ಬಿ.ಜಿ.ಹೆಗಡೆ ಪರಿಸರ ಪ್ರೇಮಿಯಾಗಿ ಜನಪರ ಕಾಳಜಿಹೊಂದಿದ ಅಪರೂಪದ ವ್ಯಕ್ತಿಯಾಗಿದ್ದರು. ಅತ್ಯುತ್ತಮ ಕೃಷಿಕರಾಗಿದ್ದ ಇವರು, ನೂರಾರು ರೈತರಿಗೆ ಅಡಿಕೆ ತೋಟದ ನಿರ್ಮಾಣದಲ್ಲಿ ಮಾರ್ಗದರ್ಶಕರಾಗಿದ್ದರು.
ಸಂತಾಪ: ಬಿ.ಜಿ.ಹೆಗಡೆಯವರ ಆಕಸ್ಮಿಕ ನಿಧನಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ,ಎನ್.ಕೆ.ಭಟ್ಟ ಮೇಣಸುಪಾಲ,ಜಿ.ಆರ್.ಹೆಗಡೆ ಕುಂಬ್ರಿಗುಡ್ಡೆ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನಿನ ತಾಲೂಕಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀಮಾತಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ, ಎಂ.ರವೀoದ್ರ, ಹಾಗೂ ವಕೀಲರಾದ ಬೀಬಿ ಅಮೀನಾ ಶೇಖ ಮುಂತಾದವರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ

error: