April 20, 2024

Bhavana Tv

Its Your Channel

ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿದರೆ ಭಗವಂತ ಇನ್ನಷ್ಟು ಸಂಪತ್ತು ವ್ರದ್ದಿಸುತ್ತಾನೆ. ಶಾಸಕ ಯಶವಂತರಾಯಗೌಡ ಪಾಟೀಲ.

ವಿಜಯಪೂರ ; ಮನುಷ್ಯನಿಗೆ ಆರ್ಥಿಕವಾಗಿ ಸಮ್ರದ್ದಿ ಇದ್ದರೆ ಧಾನ ಧರ್ಮ ಮಾಡುವ ಗುಣ ಇರಬೇಕು ಪ್ರತಿಯೊಂದು ಧರ್ಮವು ಧಾನ ಧರ್ಮಕ್ಕೆ ಹೆಚ್ಚು ಮಹತ್ವ ನಿಡಿದ್ದಾರೆ ಕಷ್ವದಲ್ಲಿ ಜನರಿಗೆ ಸಹಾಯ ಮಾಡಿದರೆ ಭಗವಂತ ಇನ್ನಷ್ಟು ಸಂಪತ್ತು ವ್ರದ್ದಿಸುತ್ತಾನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.


ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣದ ವಿಜಯಪೂರ ರಸ್ತೆಯ ಶ್ರೀ ಸಿದ್ದಲಿಂಗೆಶ್ವರ ವಿದ್ಯಾವರ್ಧಕ ಸಂಘ ಇಂಡಿ ಶ್ರೀ ಸಿದ್ದಲಿಂಗೆಶ್ವರ ಲ್ಯಾಂಡ್ ಡೌಲಪರಸ್ ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ಬಡವರಿಗೆ ಆಹಾರ ಧಾನ್ಯ ವಿತರಣೆ ಮಾಡಿ ಮಾತನಾಡಿದ ಅವರು ಕೊರೊನಾ ಮಹಾ ಮಾರಿ ಇಡೀ ದೇಶದ ಆರ್ಥಿಕ ವ್ಯವಸ್ಥೆ ಹಾಳು ಮಾಡಿದಲ್ಲದೇ ಅನೇಕ ಜೀವಗಳನ್ನು ಕೂಡಾ ಬಲಿ ಪಡೆದುಕೊಂಡಿದೆ ಇಂತಹ ಸಂಕಷ್ಟ ಪರಿಸ್ಥಿತಿ ಎಂದಿಗೂ ಬರಬಾರದು ಎಂದು ಭಗವಂತನಲ್ಲಿ ಪ್ರಾರ್ಥಿಸಿದರು,

ಕಳೆದ ಬಾರಿಯೂ ಕೂಡಾ ಕೊವಿಡ್ ಪ್ರಥಮ ಅಲೆಯಲ್ಲಿ ಬಸವರಾಜ ಕಣ್ಣಿ ಇವರು ಬಡವರಿಗೆ ಆಹಾರ ಕಿಟ್ಟ ನೀಡಿ ಮಾನವಿಯ ಮೌಲ್ಯಗಳಿಂದ ಮರೆದಿದ್ದಾರೆ. ಈ ಬಾರಿಯೂ ಆಹಾರ ಧಾನ್ಯ ನೀಡುತ್ತಿರುವುದು ಕುಟುಂಬದ ದೊಡ್ಡಗುಣ.ಕೊವಿಡ್ ೧೯ ಸಂದರ್ಭದಲ್ಲಿ ಅನೇಕ ಬಡವರು ಕಷ್ಟದಲ್ಲಿದ್ದಾರೆ ಇಂತಹ ಕಷ್ಟದಲ್ಲಿದ್ದಾಗ ಆರ್ಥಿಕವಾಗಿ ಸದ್ರಡರಾದವರು ಹ್ರದಯ ಶ್ರೀಮಂತಿಕೆಯುಳ್ಳ ಜನರು ಸಹಾಯ ಸಹಕಾರ ಮಾಡುತ್ತಿರುವುದು ಶ್ಲಾಘನಿಯವಾಗಿದೆ ಕೊರೊನಾ ರೊಗ ಹತೊಟಿಗೆ ಬರುತ್ತಿದೆ ಸಾಮಾಜಿಕ ಅಂತರವೆ ಇದಕ್ಕೆ ದಿವ್ಯ ಔಷಧಿ ಜನರು ನಿಮ್ಮನ್ನೆ ನೀವು ದಿಗ್ಬಂದನ ಹೇರಿಕೊಳ್ಳಬೇಕು ಎಂದರು.
ಬಸವರಾಜ ಕಣ್ಣಿ ಅವರು ಮಾತನಾಡಿದರು. ಈ ಸಂಧರ್ಭದಲ್ಲಿ ರಮೇಶ ಗುತ್ತೆದಾರ.ತಮ್ಮಣ್ಣ ಪೂಜಾರಿ.ಸೊಮಶೇಖರ ಬ್ಯಾಳಿ.ಶಿವುಕುಮಾರ ಕಣ್ಣಿ.ಮಲ್ಲಿಕಾರ್ಜುನ ಬೇನೂರ.ಜಾವಿದ್ ಮೊಮಿನ.ಅವಿನಾಶ ಬಗಲಿ.ಶಿವಾನಂದ ಬಿಸನಾಳ.ಯಲಗೊಂಡ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ. ಬಿ ಎಸ್ ಹೊಸೂರ. ಇಂಡಿ

error: