June 22, 2021

Bhavana Tv

Its Your Channel

ಹಾಸ್ಟೇಲಗಳಲ್ಲಿದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಮತ್ತು ಕೋವಿಡ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಮನವಿ.

ವಿಜಯಪೂರ ; ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಇಂದು ಹಾಸ್ಟಲ್ ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಹಾಗೂ ಕೊವಿಡ್ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾಗಳಾದ ರಾಹುಲ ಶಿಂದೆ ಯವರಿಗೆ ಮನವಿ ಸಲ್ಲಿಸಿದರು.
೨೦೨೦ ಮಾರ್ಚ ತಿಂಗಳಿAದ ಇಲ್ಲಿಯವರೆಗೆ ವೇತನವನ್ನು ಪಾವತಿಸಲು ಒತ್ತಾಯಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಮಾತನಾಡುತ್ತಾ ಸರ್ಕಾರವು ಈ ಕಾರ್ಮಿಕರಿಗೆ ಲಾಕಡೌನ ರಜೆ ವೇತನವನ್ನು ಕೂಡುವದಾಗಿ ಆಶ್ವಾಸನೆ ನೀಡಿ ಇಲ್ಲಿಯವರೆಗೆ ವೇತನವನ್ನು ಪಾವತಿಸದ ಕಾರಣ ಸಂಬAಧಪಟ್ಟ ಅಧಿಕಾರಿಗಳು ಕೂಡಲೆ ವೇತನವನ್ನು ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹುಲುಗಪ್ಪ ಚಲವಾದಿ, ಅಂಗನವಾಡಿ ಸಂಘದ ಬಿ ಸಿ ವಾಲಿ, ಮಾಜಿ ಪುರಸಭಾ ಸದಸ್ಯರಾದ ಸಿದ್ದು ಡಂಗಾ, ಪ್ರಕಾಶ ದೇಸಾಯಿ,ಶಿವಶಾಂತ ದೂಳಗೋಂಡೆ, ಸುನೀತಾ ರಾಠೋಡ, ದಾನಮ್ಮ ಹೂಗಾರ,ಗಂಗಾಬಾಯಿ, ಸುಮಂಗಲಾ ಕುಂಬಾರ,ಶಿವಾನAದ ಮುತಕೇರಿ, ಸಂಗಮೇಶ ಚಂದ್ರಕಿ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು
ವರದಿ ಬಿ ಎಸ್ ಹೊಸೂರ.

error: