April 23, 2024

Bhavana Tv

Its Your Channel

“ಚವಡಿಹಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ: ತಾ.ಪಂ ಐಇಸಿ ಕೋ-ಆರ್ಡಿನೇಟರ್ ಚಾಂದಕವಟೆ ಭೇಟಿ”

ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ಚವಡಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯಡಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಇಂಡಿ ತಾ.ಪಂ ಐಇಸಿ ಕೋ-ಆರ್ಡಿನೇಟರ್ ಡಿ.ಎ ಚಾಂದಕವಟೆ ಅವರು ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿ, ಕಾರ್ಮಿಕರೊಂದಿಗೆ ಮಾತನಾಡಿ, ನರೇಗಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ನಂತರ.ಮಾಧ್ಯಮದವರೊAದಿಗೆ ಮಾತನಾಡಿ, ಇಲ್ಲಿ ೭೨ ಜನ ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಸರ್ಕಾರದ ಕೋವಿಡ್ ನಿಯಮಗಳೊಂದಿಗೆ ಕಾರ್ಮಿಕರು ಮಾಸ್ಕ್, ಸ್ಯಾನಿಟೇಸರ್ ಬಳಸಿಕೊಂಡು ಕಾಮಗಾರಿ ಮಾಡುತ್ತಿದ್ದಾರೆ. ಲಾಕ್ ಡೌನ್ ಆದ ಕಾರಣ ಪದವಿ ಶಿಕ್ಷಣ ಪಡೆದವರು ಸಹ ಉದ್ಯೋಗ ಮಾಡುತ್ತಾ ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಹಳ್ಳ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ ಕಾರ್ಮಿಕರು ಮಾತನಾಡಿ, ನರೇಗಾ ಯೋಜನೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ನಮ್ಮ ಜೀವನಕ್ಕೆ ಆಧಾರವಾಗಿದೆ ಎಂದು ಹೇಳಿದರು.

ವರದಿ ಬಿ ಎಸ್ ಹೊಸೂರ.

error: