March 29, 2024

Bhavana Tv

Its Your Channel

ಕರೊನಾ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿ ಜೀವ ಕಳೆದುಕೊಳ್ಳಬೇಡಿ, ಶಾಸಕ ಪಿ ರಾಜೀವ್

ವಿಜಯಪೂರ ; ಕರೋನಾ ಬಗ್ಗೆ ಜಾಗೃತಿ ವಹಿಸದೆ ನಿರ್ಲಕ್ಷ್ಯ ತೋರಿದರೆ ಲಕ್ಷಾಂತರ ರೋಗಳ ಜತೆಗೆ ಜೀವ ಕಳೆದುಕೊಳ್ಳುವ ಅಪಾಯ ತಪ್ಪಿದ್ದಲ್ಲ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬೆಳಗಾವಿ ಜಿಲ್ಲೆಯ ಕುಂಡ ಶಾಸನ ಪಿ.ರಾಜೀವ್ ಹೇಳಿದರು.
ವಿಜಯಪುರ ಜಿಲ್ಲೆಯ ಗೋಳಸಂಗಿ ಮತ್ತು ಕೂಡಗಿ ತಾಂಡಾಗಳಲ್ಲಿ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ,ನ್ಯಾಷನಲ್ ಸೇವಾ ಡಾಕ್ಟರ್ ಅಸೋಸಿಯೇಷನ್ (ಎನ್‌ಎಸ್ ಡಿಎ), ವಿಜಯಪುರ ಕೋವಿಡ್ ಅರೈಕೆ ಕೇಂದ್ರದ ಸಹಯೋಗದಲ್ಲಿ ಕೋವಿಡ್-೧೯ ಅರಿವು ಮತ್ತು ಲಸಿಕಾ ಕಾರ್ಯಕ್ರಮಕ್ಕೆ ನೀಡಿ ಅವರು ಮಾತನಾಡಿದರು.
ಕೂಡಗಿ ತಾಂಡಾದಲ್ಲಿ ತಮ್ಮ ನಿಗಮದಿಂದ ಸಮುದಾಯ ಭವನ ನಿರ್ಮಿಸಲು ೨೫ ಲಕ್ಷ ರೂ. ನೀಡುವುದಾಗಿ ಬರವಸೆ ನೀಡಿದ ಶಾಸಕರು, ಗೊಳಸಂಗಿ ತಾಂಡಾದಲ್ಲಿ ಸೇವಾಲಾಲ ಮಂದಿರ ನಿರ್ಮಾಣಕ್ಕೆ ೧೫ ಲಕ್ಷ ರೂ. ಪೈಕಿ ಈಗಾಗಲೇ ೧೨ ಲಕ್ಷ ರೂ. ನೀಡಲಾಗಿದ್ದು, ಬಾಕಿ ಉಳಿದ ೩ ಲಕ್ಷ ರೂ. ಇದೇ ದಿನ ಬಿಡುಗಡೆಗೊಳಿಸಿ ಹೆಚ್ಚಿನ ಅನುದಾನವನ್ನು ಬೇರೆ ಮೂಲದಿಂದ ಕೊಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಸಂಸ್ಕಾರ ಮರೆತ ಮಕ್ಕಳ ಆಧುನಿಕ ಜೀವನ ಪದ್ಧತಿಯಿಂದಾಗಿ ಕರೊನಾ ಜನ್ಮ ತಳೆದಿದೆ ಎಂದು ವಿಶ್ಲೇಷಿಸಿದರು.

ಈ ಕಾರ್ಯಕ್ರಮದಲ್ಲಿ ಕೆಸರಟ್ಟ ಶಂಕರಲಿAಗ ಗುರುಪೀಠದ ಬಾಲಶಿವಯೋಗಿ ಸೋಮಲಿಂಗ ಶ್ರೀ, ಉಪವಿಭಾಗಾಧಿಕಾರಿ ಬಲದಾಮ ಲಮಾಣಿ, ತಾಪಂ ಸದಸ್ಯ ಅಮೃತ ಯಾದವ ಅರಿವು ತಜ್ಞ ಡಾ. ಬಾಬು ರಾಜೇಂದ್ರ ಮಾತನಾಡಿದರು. ಜಂಗಮ ಮಹಾರಾಜರು, ತೊರವಿ ಗೋಪಾಲ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಸಂತೋಷ ನಾಯಕ, ಗ್ರಾಪಂ ಅಧ್ಯಕ್ಷೆ ಶೇಕುಬಾಯಿ ರಾಠೋಡ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ,ಕೂಡಗಿ ಪಿಎಸ್‌ಐ ರೇಣುಕಾ ಜಕನೂರ, ವೈದ್ಯಾಧಿಕಾರಿ ಡಾ. ಗೋವಿಂದರಾಜ, ಗ್ರಾಪಂ ಉಪಾಧ್ಯಕ್ಷೆ ದ್ಯಾಮವ ತೋಳಮಟ್ಟಿ, ಸವಿತಾ ಚವಾಣ್, ಕೇಶವ ಪವಾರ, ಪ್ರಸಾದ ದಳವಾಯಿ, ವಿನೋದ ನಾಯಕ, ಶೇಖರ ಪವಾರ, ವಿ.ಎಸ್. ಲಮಾಣಿ ಇತರರು ಉಪಸ್ಥಿತರಿದ್ದರು.
ವರದಿ ಬಿ ಎಸ್ ಹೊಸೂರ.ಇಂಡಿ

error: