March 29, 2024

Bhavana Tv

Its Your Channel

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಹಾಗೂ ಕೊರೋನಾ ರೋಗದಿಂದ ಮರಣ ಹೊಂದಿದವರಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಜೆಡಿಎಸ್ ಆಗ್ರಹ

ವಿಜಯಪೂರ: ಜಿಲ್ಲೆಯ ಇಂಡಿ ನಗರದಲ್ಲಿ ಇಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ನೇತೃತ್ವದಲ್ಲಿ ಕಾರ್ಯಕರ್ತರು ತಹಶೀಲ್ದಾರ್ ಚಿದಂಬರA ಕುಲಕರ್ಣಿರವರಿಗೆ ಮನವಿ ಸಲ್ಲಿಸಿದರು.ಜ್ಯಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರು ರಾಜ್ಯ ಸಮೀತಿ ಕರೆ ಮೇರೆಗೆ ಇಂಡಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಬಿ ಡಿ ಪಾಟೀಲ ಮಾತನಾಡಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಬಹಳ ತೋಂದರೆ ಆಗುತ್ತಿದ್ದು ಇದರಿಂದ ನಿತ್ಯಜೀವನದಲ್ಲಿ ಜನಸಾಮಾನ್ಯರು ಜೀವನ ನಡೆಸುವುದು ತೋಂದರೆ ಆಗುತ್ತಿದ್ದು ಕೂಡಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಕಡಿಮೆ ಮಾಡಲು ಮುಂದಾಗಬೇಕೇAದು ಎಚ್ಚರಿಕೆ ನೀಡಿದ್ದು ಹಾಗೂ ಕೊರೋನಾದಿಂದ ಮರಣ ಹೊಂದಿದ ರೋಗಿಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲು ಮುಂದಾಗಿದೆ ಇದು ಅಸಮಂಜಸವಾಗಿದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಆದರೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆ ಇವರಿಗೆ ಪರಿಹಾರವಿಲ್ಲವೆಂದು ಸರ್ಕಾರ ಘೋಷಿಸಿದೆ ಇದರಿಂದ ಸಾವಿರಾರು ಬಡ ರೋಗಿಗಳಿಗೆ ಆಕ್ಸಿಜನ್ ಮತ್ತು ವೇಂಟಿಲೇಟರ ಬೆಡ್ ಸಿಗದೆ ಮರಣ ಹೊಂದಿದವರಿಗೆ ಅನ್ಯಾಯ ವಾಗಿದ್ದು ಮಾನ್ಯ ಮುಖ್ಯಮಂತ್ರಿಗಳು ಕೇವಲ ಬಿ ಪಿ ಎಲ್ ಕಾರ್ಡ್ ದಾರರಿಗೆ ಸೌಲಭ್ಯಗಳನ್ನು ಒದಗಿಸುವ ಸರ್ಕಾರ ನಿರ್ಧಾರ ಕೈಬಿಡಬೇಕೆಂದು ಬಿ ಡಿ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಇದೆ ಸಂದರ್ಭದಲ್ಲಿ ,ಮಾಜಿ ಪುರಸಭಾ ಸದಸ್ಯರಾದ ಸಿದ್ದು ಡಂಗಾ ಶ್ರೀ ಶೈಲಗೌಡ ಪಾಟೀಲ,ಮಹಿಬೂಬ ಬೇವನೂರ ಬಾಳು ರಾಠೋಡ ಕುಮಾರ್ ಸುರ್ಗಳ್ಳಿ,ಪಜಲು,ಹಣಮಂತ ಹೂನ್ನಳ್ಳಿ ಮುಲ್ಲಾ.ಮಂಜು ಬಡಿಗೇರ, ಸಂತೋಷ ರಾಠೋಡ, ರಫೀಕ್ ಸೋಡೆವಾಲೆ, ನಿಯಾಝ್ ಅಗರಖೇಡ, ಮಜೀದ್ ಸೌದಾಗರಗ, ಗೌಸ್ ಬಾಗವಾನ,ಶಾಮ ಪೂಜಾರಿ, ಶಂಕರ್ ಶಿರಶ್ಯಾಡ,ಬೀರು ಹೂಗಾರ,ಕಲ್ಮಶ ವಾಲಿಕಾರ, ಈರಣ್ಣ ಭಜಂತ್ರಿ,ಅಬುಬಕರ ತಾಂಬೋಳಿ, ಸಿದ್ದು ಬಿರಾದಾರ.ರಾಕೇಶ ಬಬಲಾದಿಕರ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ ಬಿ ಎಸ್ ಹೊಸೂರ.

error: