April 25, 2024

Bhavana Tv

Its Your Channel

ವಿಜಯಪೂರ ಜಿಲ್ಲಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿ

ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಶ್ರೀ ಸಂಗನಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕೂಡಾ ಕೋವಿಡ್ ಮಾರ್ಗಸೂಚಿಯ ಪ್ರಕಾರ ಸುಸರ್ಜಿತವಾಗಿ ಪರೀಕ್ಷೆಗಳು ನಡೆದವು.ತಾಂಬಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಚಪ್ಪ ಯವರು ಎಲ್ಲಾ ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೆಸರ್ ಉಚಿತವಾಗಿ ನೀಡಿದರು ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು ಹಾಗೂ ಈ ಬಾರಿ ತಾಂಬಾ ಪರಿಕ್ಷಾ ಕೇಂದ್ರದಲ್ಲಿ ಒಟ್ಟು ೧೮೧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತಮ್ಮ ಹೆಸರನ್ನು ನೊಂದಾಯಿಸಿಕೊAಡಿದ್ದರು. ಇದರಲ್ಲಿ ೪ ವಿದ್ಯಾರ್ಥಿಗಳು ವಲಸೆ ವಿದ್ಯಾರ್ಥಿಗಳಾಗಿದ್ದರೆ. ೧೭೭ ವಿದ್ಯಾರ್ಥಿಗಳು ಸ್ಥಳೀಯರುಯಾಗಿದರು. ಒಟ್ಟು ೧೮೧ ವಿದ್ಯಾರ್ಥಿಗಳಲ್ಲಿ ೧೭೯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಜರಿದ್ದರು.ಇಬ್ಬರು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.ಇಂಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಯವರ ಹಾಗೂ ಎಸ್ ಎಸ್ ಎಲ್ ಸಿ ಪರಿಕ್ಷಾ ನೋಡಲ್ ಅಧಿಕಾರಿ ಸಂತೋಷ ಪಾಟೀಲಯವರ ಮಾರ್ಗದರ್ಶನದಲ್ಲಿ ಕೋವಿಡ್ ಮಾರ್ಗಸೂಚಿಯ ಪ್ರಕಾರ ಸುಸರ್ಜಿತವಾಗಿ ಪರಿಕ್ಷೆ ನಡೆಸಿ ಕೊಡಲಾಯಿತು ಎಂದು ತಾಂಬಾ ಪರಿಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಶ್ರೀ ಬಿ ಬಿ ಪಾಟೀಲ ತಿಳಿಸಿದರು.ಕಸ್ಟೊಂಡಿಯನ್ ಎಸ್ ಎಮ್ ಚೌವ್ಹಾಣ್ ಸಹಕರಿಸಿದರು ಹಾಗೂ ಈ ಬಾರಿ ಎಸ್ ಎಸ್ ಎಲ್ ಸಿ ಪರಿಕ್ಷೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದಕ್ಕೆ ಸಂಸ್ಥೆಯ ಅಧ್ಯಕ್ಷರಾದ ವೃಷಭಲಿಂಗ ಮಾಹಾಸ್ವಾಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ ಬಿ ಎಸ್ ಹೊಸೂರ.

error: