April 25, 2024

Bhavana Tv

Its Your Channel

೮ನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ ಸಮಗ್ರ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಗೇಟ್ ಬಂದ ಮಾಡಿದ ರೈತರು.

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಾ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಇಂದು ಎಂಟನೆಯ ದಿನದಲ್ಲಿ ಮುಂದುವರಿದಿದೆ ತೆನ್ನಹಳ್ಳಿ,ಮಾವಿನಹಳ್ಳಿ,ಇಂಗಳಗಿ,ರೂಗಿ, ತಡವಲಗಾ ಹಂಜಗಿ ಅರ್ಜುಣಗಿ, ತೆಗ್ಗಿಹಳ್ಳಿ ಮುಂತಾದ ಗ್ರಾಮದ ಸುಮಾರು ೫೦೦ರೈತರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ.ನಂತರ ಮಿನಿ ವಿಧಾನಸೌಧ ಮುತ್ತಿಗೆ ಹಾಕಿ ಗೇಟ್ ಬಂದಮಾಡುವ ಮುಖಾಂತರ ಸರ್ಕಾರಕ್ಕೆ ಮುಂದಿನ ಹೋರಾಟದ ತೀವ್ರತೆಯನ್ನು ರೈತರು ಆಕ್ರೋಶ ವ್ಯಕ್ತಪಡಿಸಿದರು.ಹೋರಾಟಗಾರನ್ನು ಉದ್ದೇಶಿಸಿ ಬಿ ಡಿ ಪಾಟೀಲರು ಮಾತನಾಡುತ್ತಾ ರೈತರ ತಾಳ್ಮೆ ಕಳೆದು ಕೋಳುತ್ತಾರೆ ,ಕೂಡಲೆ ಸಂಬAಧಿಸಿದ ಸಚಿವರು ಹೋರಾಟದ ಉದ್ದೇಶ ರೈತರ ಬೇಡಿಕೆಗಳೇನು ಎಂದು ಸಚಿವರು ಖುದ್ದಾಗಿ ಅರ್ಥ ಮಾಡಿಕೊಳ್ಳಬೇಕು ಕೂಡಲೆ ಸಚಿವರು ಖುದ್ದಾಗಿ ಭೇಟಿ ನೀಡಿ ರೈತರ ಮನವಿಯನ್ನು ಆಲಿಸಬೇಕು ಎಂದು ಆಗ್ರಹಿಸಿದರು.ಹೋರಾಟದಲ್ಲಿ ಬೂತಾಳಸಿದ್ದ ವರಕನಹಳ್ಳಿ, ಹಿರಗಪ್ಪ ಚಿಗರಿ, ಮಳಸಿದ್ದ, ಮೂಲಿಮನಿ, ನೀಲಪ್ಪ ಹಿಪ್ಪರಗಿ, ಗುರಪ್ಪ ಮಡಿವಾಳ,ಬಾಳು.ಕೋಟಗೋಂಡ, ಭೀಮರಾಯ ಉಪ್ಪಾರ, ಸಿದ್ದಪ್ಪ ಟೋನೆ,ಜಕ್ಕಪ್ಪ ಉಪ್ಪಾರ,ಕೇಂಚಪ್ಪಾ ನಿಂಬಾಳ,ಜೆಟೇಪ್ಪ ಇಮ್ಮಡಪ್ಪಗೋಳ,ಮಲ್ಲು ಬೀರನಹಳ್ಳಿ, ಶರಣಪ್ಪ ಹೊಸೂರ,ಯಲ್ಲಪ್ಪ ಹರನಾಳ,ರಾವತಪ್ಪ ಗುಗದಡ್ಡಿ ನಂದಪ್ಪ ಹೊಸೂರ.ಶಿವಪ್ಪ ಮಾಶಾಳ,ನಂದಪ್ಪ ಪೂಜಾರಿ,ಅರವೀಂದ ಪೂಜಾರಿ,ಅಮಸಿದ್ದ,ಬಸನಾಳ,ದೀಲಿಪ್ಪ ಕೋಳಿ, ಸಿದ್ದಪ್ಪ ಪೂಜಾರಿ,ಬಸಗೋಂಡ ತೆನ್ನಿಹಳ್ಳಿ, ಶ್ರೀಶೈಲ ಆಳೂರ.ಸುಧಾಕರ ನಾಯಕ, ಗೋಪಾಲ ನಾಯಕ, ಸುಭಾಸ್ ನಾಯಕ, ಶಶಿಕಾಂತ ಪವಾರ,ಲವಕುಶ ಹೂಗಾರ, ಉಮೇಶ ನಾಯ್ಕ,ರವಿ ಜಾದವ್, ವಿನೋದ್ ನಾಯಕ, ಮುಂತಾದವರು ಉಪಸ್ಥಿತರಿದ್ದರು.

ವರದಿ.ಬಿ ಎಸ್ ಹೊಸೂರ.

error: