April 20, 2024

Bhavana Tv

Its Your Channel

ಬಡಾವಣೆಗಳಲ್ಲಿ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಗರ ನೈರ್ಮಲ್ಯಕರಣಕ್ಕೆ ಒತ್ತಾಯಿಸಿ ಕರವೇ ವತಿಯಿಂದ ಆಯುಕ್ತರಿಗೆ ಮನವಿ

ವಿಜಯಪುರ– ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬನದ ಜಿಲ್ಲಾ ಪದಾಧಿಕಾರಿಗಳು ವಿಜಯಪುರ ನಗರದ ಬಡಾವಣೆಗಳನ್ನು ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಗರ ನೈರ್ಮಲ್ಯಕರಣಕ್ಕೆ ಒತ್ತಾಯಿಸಿ ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ ಮ್ಯಾನೇಜರ್ ಶ್ರೀ ಎಲ್.ಎಂ.ಕಾAಬಳೆ ಅವರಿಗೆ ಬೆಳಗ್ಗೆ ೧೧ ಗಂಟೆಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ, ನಗರದ ಎಲ್ಲಾ ಬಡಾವಣೆಗಳಲ್ಲಿ ಕಸದರಾಶಿ ದಿನ ದಿನೇ ಸಂಗ್ರಹಗೊAಡು ಹೆಚ್ಚಾಗುತ್ತಿದ್ದು ಇದರಿಂದ ಅನಾರೋಗ್ಯಕರ ಕಾಯಿಲೆಗಳಾದ ಮಲೇರಿಯಾ ಹಾಗೂ ಡೆಂಗ್ಯುಗಳAತಹ ಮಾರಕ ಕಾಯಿಲೆಗಳು ಹೆಚ್ಚಾಗುತ್ತಿವೆ.
ಇದರಿಂದ ಪ್ರತಿಯೊಂದು ಮನೆಯಲ್ಲಿ ವೈದ್ಯರು, ಚಿಕ್ಕ ಮಕ್ಕಳು ಇರುವ ಕಾರಣದಿಂದ ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು ಅವುಗಳ ಕಡಿತದಿಂದ ಬರವಣಿಗಳು ಮಲಿನಗೊಂಡು ಬಹುತೇಕ ಮನೆಗೆ ಒಬ್ಬರು ಹಾಗೂ ಇಬ್ಬರು ಕಾಯಿಲೆಗೆ ಗುರಿಯಾಗುತ್ತಿದ್ದಾರೆ.

ತೀವ್ರ ಗತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿದ್ದಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಕರವೇ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಟಂಕಸಾಲಿ, ನಗರದ ಬಡಾವಣೆಗಳಾದ ಬಾಗಲಕೋಟ ರಸ್ತೆಯ ಆಯುರ್ವೇದ ಮಹಾವಿದ್ಯಾಲಯ, ವಿದ್ಯಾನಗರ, ಕೆ.ಎಸ್.ಆರ್.ಸಿ.ಕಾಲೋನಿ, ಬಸವನಗರ, ವಾರ್ಡ್ ನಂ ೧೬ರ ಯೋಗಪೂರ್ ಬಡಾವಣೆ ಮೌನೇಶ್ವರ ನಗರ ನವಭಾಗ್ ಹವೇಲಿ ಗಲ್ಲಿ ಹೀಗೆ ಮುಂತಾದವು ಬಡಾವಣೆಗಳಲ್ಲಿ ರಸ್ತೆ ಗುಂಡಿ ಬಿದ್ದು ನೀರು ತುಂಬಿಕೊAಡು ರಸ್ತೆ ಸಂಚಾರಕ್ಕೆ ಅಡೆತಡೆಯಾಗುತ್ತಿದೆ ಕೂಡಲೇ ನಗರದ ಹಾಳು ಬಿದ್ದ ರಸ್ತೆಗಳನ್ನು ರಿಫೇರಿ ಮಾಡುವಂತೆ ಒತ್ತಾಯಿಸಿದರು.

ಈ ಸದರ್ಭದಲ್ಲಿ ರಾಜ ಕಾರ್ಯಧ್ಯಕ್ಷ ಗುಲಾಬ್ ಭಂಡಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ.ಬೆನ್ನಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಬ್ದುಲ್ ಸತ್ತಾರ್ ಪೀರಜಾದೆ, ಮಹಿಳಾ ಘಟಕದ ಪದಾಧಿಕಾರಿಗಳಾದ ಸೀಮಾ ಕುಲಕರ್ಣಿ, ಆಫ್ರೀನ್ ಕಾಕಂಡಕಿ, ಭಾರತೀ, ಶೈಲಾ, ರೇಷ್ಮೆ ದೇಶಪಾಂಡೆ ವಸಂತರಾವ್ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

ವರದಿ: ಮಲ್ಲಿಕಾರ್ಜುನ ಬುರ್ಲಿ

error: