April 19, 2024

Bhavana Tv

Its Your Channel

ಕಾನೂನು ಪದಕೋಶ ಹೊರತಂದಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಶೇಷರಾವ್ ಮಾನೆ ಸ್ವಾಗತ

ವಿಜಯಪುರ ೨೫- ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಭಾಷಾಂತರ ನಿರ್ದೇಶನಾಲಯ ಹೊರ ತಂದಿರುವ ಪದಕೋಶ ಕನ್ನಡದಲ್ಲಿ ಹೊರತಂದು ಬಿಡುಗಡೆಗೊಳಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಕಾರ್ಯ ಶ್ಲಾಘನೀಯನ್ನು ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣ್ಣದ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ಉನ್ನತ ನಡತೆಯನ್ನು ಪ್ರಶಂಶಿಸಿ ಸಿಹಿ ಹಂಚಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ ೨೦೦೩ರಲ್ಲಿ ಎಲ್ಲಾ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ ನಂತರ ಅವು ಜನಸಾಮಾನ್ಯರಿಗೆ ಹಾಗೂ ಮಾತೃಭಾಷೆಯಲ್ಲಿ ಓದಿದ ಕಾನೂನು ಪದವೀಧರರಿಗೆ ಕಾನೂನುಗಳ ಅರ್ಥ ವ್ಯಾಪಕವಾಗಿ ಪ್ರಚಾರವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯಾಲಯ ಅದನ್ನು ಗುರುತಿಸಿ ಮನ್ನಣೆಯನ್ನು ನೀಡಿದೆ. ಕಾನೂನು ನಿಘಂಟಿನ ಕೆಲಸ ಯಶಸ್ವಿಯಾಗಿದೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾನೂನುಗಳನ್ನು ಕನ್ನಡಿಗರಿಗೆ ಸರಳವಾಗಿತ್ತು ತಿಳಿಸುವ ಉದ್ದೇಶವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ .ಯಡಿಯೂರಪ್ಪ ನವರ ಪ್ರೋತ್ಸಾಹ ಇದೆಲ್ಲವನ್ನು ಮಾಡಲು ಸಾಧ್ಯವಾಗಿದೆ. ೧೫ ಕೇಂದ್ರ ಅಧಿನಿಯಮಗಳನ್ನು ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿರುವುದು ಸ್ವಾಗತಾರ್ಹ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕೆ.ಕೆ.ಬೆನ್ನಟ್ಟಿ ಮಾತನಾಡಿ ಕಾನೂನು ಪದಕೋಶ ಹೊರ ತಂದಿರುವ ರಾಜ್ಯ ಸರ್ಕಾರದ ಈ ಮಹಾನ ಕಾರ್ಯ ಕನ್ನಡ ನಾಡಿನ ವಿದ್ಯಾರ್ಥಿಗಳಿಗೆ ಹಾಗೂ ಪದವೀಧರರಿಗೆ ಶಿಕ್ಷಣ ಪಡೆಯಲು ಅನುಕೂಲವಾಗಿದೆ. ಮತ್ತು ಕನ್ನಡ ಪದಗಳು ಕಾನೂನಿನಲ್ಲಿ ಬಳಕೆಯಾಗಬೇಕು. ಕಾನೂನಿನಲ್ಲಿ ಬಳಕೆಯಾಗುವ ಪದಗಳು ಕನ್ನಡದಲ್ಲಿ ಬಳಕೆಯಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಂ.ಎA. ಖಲಾಸಿ ಮಾತನಾಡಿದರು. ಸಿದ್ದನಗೌಡ ಬಿರಾದಾರ್, ಮಹೇಶ್ ಅರಿಕೇರಿ, ಜಗದೀಶ್ ಹೊಸಮನಿ, ಜಗದೀಶ್ ಕಾಖಂಡಿಕಿ, ರಮೇಶ್ ಕೌಲಗಿ, ಮಲ್ಲಿಕಾರ್ಜುನ್ ಕೊಂಡಗೋಳಿಕರ, ಪ್ರವೀಣ ಗುಡಿಮನಿ, ಮುಂತಾದವರು ಉಪಸ್ಥಿತರಿದ್ದರು.

ವರದಿ: ಮಲ್ಲಿಕಾರ್ಜುನ ಬುರ್ಲಿ

error: