April 25, 2024

Bhavana Tv

Its Your Channel

ರೇಬೀಸ್ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ

ವಿಜಯಪೂರ:- ಜಿಲ್ಲಾ ಪಂಚಾಯಿತಿ ವಿಜಯಪೂರ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವಿಜಯಪೂರ, ವಿಜಯಪೂರ ಜಿಲ್ಲಾ ಪ್ರಾಣಿದಯಾ ಸಂಘ,ಸಹಯೋಗದಲ್ಲಿ ಹುಚ್ಚು ನಾಯಿ ರೋಗ/ರೇಬೀಸ್ ಬಗ್ಗÉ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇಂದು ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಹಾಗೂ ಸರ್ಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಶುವೈದ್ಯಾಧಿಕಾರಿ. ಎಸ್ ಬಿ ಕನಮುಡಿಗಿಯವರು ಹುಚ್ಚುನಾಯಿ ರೋಗದ ಹೆಸರು ಕೇಳಿದ ತಕ್ಷಣ ಮೈ ಜುಂ ಅನ್ನುತ್ತದೆ,ನಡುಕ ಶುರುವಾಗುತ್ತದೆ ಇದು ಸಹಜ, ಹುಚ್ಚು ನಾಯಿ ಕಡಿತದಿಂದ ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು ನಲ್ವತ್ತು ಸಾವಿರ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ.ಇದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದ್ದು ಹುಚ್ಚು ನಾಯಿ ಕಡಿತದಿಂದ ತಪ್ಪಿಸಿಕೊಳ್ಳಲು ಮಕ್ಕಳಲ್ಲಿ, ರೈತರಲ್ಲಿ, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು ಹುಚ್ಚುನಾಯಿ ಕಚ್ಚಿದಾಗ ಗಾಬರಿ ಪಡೆಯದೆ ಪ್ರಥಮ ಚಿಕಿತ್ಸೆಯಾಗಿ ತಕ್ಷಣವೇ ಮನೆಯಲ್ಲಿ ಲಭ್ಯವಿರುವ ಸಾಬೂನಿನಿಂದ ಯಥೇಚ್ಛವಾಗಿ ನೀರನ್ನು ಉಪಯೋಗಿಸಿ ಗಾಯವನ್ನು ಸ್ವಚ್ಛವಾಗಿ ತೊಳೆದು ಆಂಟಿಸೆಪ್ಟಿಕ್ ಔಷಧಿ ಹೆಚ್ಚುವುದು.ಯಾವುದೇ ಕಾರಣಕ್ಕೂ ಹತ್ತಿ ಅಥವಾ ಬಟ್ಟೆಯಿಂದ ಕಟ್ಟಬಾರದು.ತಕ್ಷಣವೇ ಸೂಕ್ತ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಕರೆನೀಡಿದರು. ಹಾಗೂ ನಮ್ಮ ಜ್ಯೂ ಟೇನ್ ಕರ್ನಾಟಕ ವಾಹಿನಿಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಎಸ್ ವೈ ಅರಸ ಗೊಂಡ, ಎಮ್ ಎನ್ ಚಲವಾದಿ,ಎಮ್ ಎಚ್ ನಧಾಪ್, ಎಲ್ ವಿ ಕಟಕದೊಂಡ, ಟಿ ಕೆ ಜಂಬಗಿ, ಗುರುಮಾತಿಯರಾದ ಜಿ ಎಮ್ ಬಿರಾದಾರ,ಎನ್ ಎನ್ ಕವಟಗಿ, ಜೆ ಸಿ ಗುಣಕಿ, ಎ ಎ ರಾಠೋಡ, ಎಸ್ ಸಿ ಗಿಡಗಂಟಿ, ಆರ್ ಎಸ್ ದೊಡ್ಡಮನಿ, ಎಸ್ ಬಿ ಹೋಸಮನಿ.ಎಸ್ ಡಿ ಎಮ್ ಸಿ ಅಧ್ಯಕ್ಷರಾದ ವಿಠೋಬಾ ವಿಜಯಪೂರ ಸೇರಿದಂತೆ ಅನೇಕರು ಮುಖಂಡರು ಹಾಗೂ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವರದಿ ಬಿ ಎಸ್ ಹೊಸೂರ.

error: