April 23, 2024

Bhavana Tv

Its Your Channel

ಮನಗೂಳಿಯಲ್ಲಿ ಗುರುವಂದನಾ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದ
ಕನ್ನಡ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಮನಗೂಳಿ, ನಂದಿಹಾಳ,ಹತ್ತರಕಿಹಾಳ,ಯರನಾಳ, ಟಕ್ಕಳಕಿ,ಹೆಗಡಿಹಾಳ,ಉತ್ತನಾಳ,ಹಿಟ್ನಳ್ಳಿ ಹಾಗೂ ಶ್ರೀ ಬಿ ಎಸ್ ಪಾಟೀಲ್ ಪದವಿಪೂರ್ವ ಮಹಾವಿದ್ಯಾಲಯ ಮನಗೂಳಿ ಯಲ್ಲಿ ವಿದ್ಯಾಭ್ಯಾಸ ಮಾಡಿದ ೧೯೮೦ ರಿಂದ ೧೯೯೦ ರವರೆಗಿನ ವಿದ್ಯಾರ್ಥಿಗಳಿಂದ ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದ ಮಂಟಪದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

೧೯೮೦ ರಿಂದ ೧೯೯೦ರ ವರ್ಷದ ವೇಳೆಯಲ್ಲಿ ಕಲಿಸುತ್ತಿದ್ದ ಗುರುಗಳನ್ನು ಹಾಗೂ ಗುರುಮಾತೆಯರನ್ನು ಬರಮಾಡಿಕೊಂಡು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

೨೨ ವರ್ಷದ ಮೇಲೆ ಸಹಪಾಠಿಗಳನ್ನು ನೋಡಿದಾಗ,ಅದೇ ರೀತಿ ಗುರುಗಳನ್ನು ಗುರುಮಾತೆಯರನ್ನು ನೋಡಿದಾಗ ಈ ವಿದ್ಯಾರ್ಥಿಗಳಲ್ಲಿ ಆಗುವ ಖುಷಿ ಬೇರೆ ಇರುತ್ತೆ ಇದನ್ನು ಅನುಭವಿಸಿದವರಿಗೆ ಗೊತ್ತು ಈ ಸವಿ ನೆನಪು.
ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಮಾರ್ಗದರ್ಶನ ನೀಡಿದ ಗುರುಗಳನ್ನು ಹಾಗೂ ಹೆತ್ತ ತಂದೆ-ತಾಯಿಯರನ್ನು ಯಾರು ಮರೆಯಬಾರದು.

ಸನ್ಮಾನ ಕಾರ್ಯಕ್ರಮವನ್ನು ಸುರೇಶ್ ಆನಂದಿ ಹಾಗೂ ಮಲ್ಲಿಕಾರ್ಜುನ ಸಾರವಾಡ ನಡೆಸಿಕೊಟ್ಟರು.
ಈ ಕಾರ್ಯಕ್ರಮವನ್ನು ಸವಿತಾ ಕುಲಕರ್ಣಿ ನಿರೂಪಿಸಿದರು, ಪ್ರಾರ್ಥನೆಯನ್ನು ಸಂಗಮೇಶ್ ಗೆಣ್ಣೂರ್ ಮಾಡಿದರು, ಶ್ರೀಮತಿ ಹಾರಿವಾಳ ಇವರು ಎಲ್ಲಾ ಗುರುಗಳಿಗೂ ಹಾಗೂ ಗುರುಮಾತೆಯರನ್ನು ಸ್ವಾಗತಿಸಿದರು.

ರೇವಣಸಿದ್ಧ ಮಣ್ಣೂರ್ ಹಾಗೂ ಗೌರಾದೇವಿ ನಿಡೋಣಿ ಈ ಕಾರ್ಯಕ್ರಮದ ಬಗ್ಗೆ ಅವರ ಅನಿಸಿಕೆಗಳನ್ನು ಹಂಚಿಕೊAಡರು, ವಂದನಾರ್ಪಣೆ ಈರಣ್ಣ ಉಕ್ಕಲಿ ಮಾಡಿದರು.೧೮ ಗುರುಗಳು,೧೦೦ ಜನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಮಲ್ಲಿಕಾರ್ಜುನ ಬುರ್ಲಿ

error: