April 20, 2024

Bhavana Tv

Its Your Channel

ತಾಳಿಕೋಟೆಯಲ್ಲಿ ಪುರಾತನ ದೇವಾಲಯದ ಮರು ಪ್ರತಿಷ್ಠಾಪನೆ

ವಿಜಯಪುರ: ತಾಳಿಕೋಟೆಯಲ್ಲಿ ಹುಣಸಗಿ ರಸ್ತೆಯ ಮಾರ್ಗದಲ್ಲಿ ಹಳ್ಳದ ಶ್ರೀ ಹನುಮಂತ ದೇವಾಲಯವು ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ನಂತರ ಅದನ್ನು ಜೀರ್ಣೋದ್ದಾರ ಮಾಡಲೆಂದು ಅನೇಕರು ಪ್ರಯತ್ನ ಪಟ್ಟರೂ ಸಹ ಆಗಲಿಲ್ಲ. ಇದನ್ನರಿತ ತಾಳಿಕೋಟೆಯ ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ ತಮ್ಮ ಸ್ವಂತ ಖರ್ಚಿನಲ್ಲಿ ಶ್ರೀ ಹಳ್ಳದ ಹನುಮಂತ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ.

ಈ ವೇಳೆ ಮಾತನಾಡಿದ ಜೈಸಿಂಗ್ ಮೂಲಿಮನಿ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಅನೇಕ ಅಡೆತಡೆಗಳು ಬಂದರೂ ನಾವು ಪ್ರಯತ್ನ ಬಿಡಲಿಲ್ಲ ಈ ಕೆಲಸ ಹನುಮಂತನ ಕೃಪೆಯಿಂದ ಆಗಿದೆ ಊರ ದಡದಲ್ಲಿ ಊರ ಬಾಗಿಲಿಗೆ ಶ್ರೀ ಹನುಮಾನ ಶ್ರೀರಕ್ಷೆ ಸಿಗಲಿದೆ ಎಂಬ ನಂಬಿಕೆ ನನಗಿದೆ.
ಒಟ್ಟು 5,00,000 ವೆಚ್ಚ ತಗುಲಿದ್ದು ಈ ದೇವಸ್ಥಾನವು ತಾಳಿಕೋಟೆ ಹುಣಸಗಿ ಮಾರ್ಗದಲ್ಲಿ ಅಡ್ಡ ಹರಿಯುವ ತಾಳಿಕೋಟಿಯ ಡೋಣಿ ನದಿ ದಡದಲ್ಲಿ ಸುಂದರವಾಗಿ ವಿರಾಜಮಾನವಾಗಿದೆ…….. ಶ್ರೀ ಹನುಮಾನ್ ಮೂರ್ತಿಗೆ ಒಬ್ಬ ಭಕ್ತಾದಿ ಐವತ್ತು ಸಾವಿರ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ

ಇಂದು ಬೆಳಗ್ಗೆ ತಾಳಿಕೋಟೆಯ ಬಜಾರ ಶ್ರೀ ಹನುಮಾನ್ ಮಂದಿರದಿAದ ಪ್ರಮುಖ ಬೀದಿಗಳಲ್ಲಿ ಶ್ರೀ ಹನುಮಾನ್ ಭವ್ಯ ಮೂರ್ತಿ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಹೊರಟ ಲಾಯಿತು.ಇದೇ ವೇಳೆ ಮೆರವಣಿಗೆಯಲ್ಲಿ ಇದ್ದಕ್ಕಿದ್ದ ಹಾಗೆ ವೀರಸಾವರ್ಕರ್ ಫೋಟೋ ಕೂಡ ಕಾಣಿಸಿಕೊಂಡಿತು ಬೆಳಿಗ್ಗೆ ಹೋಮ-ಹವನ ನಂತರ ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದು ಸಕಲ ಭಕ್ತಾದಿಗಳು ಆಗಮಿಸಿ ಶ್ರೀ ಹನುಮಂತನ ಕೃಪೆಗೆ ಪಾತ್ರರಾಗಿದ್ದಾರೆ

ವರದಿ: ಅಮೋಘ ತಾಳಿಕೋಟೆ

error: