May 11, 2021

Bhavana Tv

Its Your Channel

ಅಧಿಕಾರಿಗಳ ನಿಲ೯ಕ್ಷ್ಯದಿಂದ ಕ್ವಾರಂಟೈನ್ ಕೇಂದ್ರದಲ್ಲಿ ಕಳಪೆ ಮಟ್ಟದ ಆಹಾರ ವಿತರಣೆಯ ಆರೋಪ

ಬಿಜಾಪುರ: ಜಿಲ್ಲೆಯ ಇಂಡಿ ತಾಲೂಕಿನ ” ನಾದ ” ಕೆ.ಡಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಹಾರಾಷ್ಟ್ರ,ಕರಾಡ, ಪುಣೆ,ಹೀಗೆ ಬೇರೆ ರಾಜ್ಯಗಳಿಂದ ಬಂದ ೧೮ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ನೆರೆ ರಾಜ್ಯದಿಂದ ಬಂದವರಲ್ಲಿ ರಾಜ್ಯದಲ್ಲಿ ಕರೋನಾ ಭೀತಿ ಎದುರಾಗಿದೆ. ಈ ನಡುವೆ ಅವರಿಗೆ ಕೊಡುವ ಆಹಾರವು ಸತ್ವವಿಲ್ಲದ ಅನ್ನ, ಸಾರು,ತಯಾರಿಸಿ ಒಂದೆ ರಟ್ಟಿನ ಬಾಕ್ಸದಲ್ಲಿ ಒಂದೆ ಚಮಚ ಇಡುತ್ತಾರೆ ಅದರಿಂದಲೇ ಎಲ್ಲರೂ ಆಹಾರ ತೆಗೆದುಕೊಂಡು ಸೇವಿಸುತ್ತೇವೆ. ಇದರಿಂದ ನಮಗೆ ತುಂಬಾ ಭಯವಾಗುತ್ತಿದೆ ಸಂಬoಧಿಸಿದ ಅಧಿಕಾರಿಗಳು ಈ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕ್ವಾರಂಟೈನಲ್ಲಿರುವವರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ. ಸಂಭದಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

error: