March 25, 2024

Bhavana Tv

Its Your Channel

ಗುಮ್ಮಟ ನಗರಿಯಲ್ಲಿ ಕರೋನ ಆರ್ಭಟ; ಸೊಂಕಿತರ ಸಂಖ್ಯೆ ೮೧ಕ್ಕೆ ಏರಿಕೆ

ಬಿಜಾಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಕರೋನಾ ಆರ್ಭಟ ಇಂದು ಕೂಡಾ ಮುಂದುವರೆದಿದ್ದು ಮಧ್ಯಾಹ್ನದ ಹೆಲ್ತ್ ಬುಲೆಟಿನ್‌ನಲ್ಲಿ ಮತ್ತೆ ಎರಡು ಕೋರೋನಾ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದಿದ್ದ ಇಬ್ಬರು ಕೋರೋನಾ ವೈರಸ್ ಪತ್ತೆಯಾಗಿದ್ದು ೩೨ವರ್ಷದ ಪುರುಷ ಪೇಷಂಟ್ ನಂಬರ್ ೨೪೨೦ ಹಾಗೂ ೨೩ ವರ್ಷದ ಯುವಕ ಪೇಷಂಟ್ ನಂಬರ ೨೪೨೧ ಎಂದು ಗುರುತಿಸಲಾಗಿದೆ. ಇರ್ವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗ ಸೊಂಕಿತರ ಸಂಖ್ಯೆ ೮೧ಕ್ಕೆ ಏರಿಕೆಯಾಗಿದೆ. ಒಟ್ಟಿನಲ್ಲಿ ಮೂರು ದಿನದಿಂದ ಬಿಟ್ಟುಬಿಡದೆ ರಣಕೇಕೆ ಕಾಕುತ್ತಿರುವ ಕೊರೋನಾ ಜನತೆಯಲ್ಲಿ ಆತಂಕವನ್ನುoಟುಮಾಡಿದೆ. ನಿಯಂತ್ರಣಕ್ಕಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ವೈರಸ್ ವಿರುದ್ದ ಹೋರಾಟ ನಡೆಸಬೇಕಿದೆ

error: