March 25, 2024

Bhavana Tv

Its Your Channel

ಹಾಲುಮತ ಮಹಾಸಭಾ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಜರುಗಿತು.

ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಹಾಲುಮತ ಮಹಾಸಭಾ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ತಾಲೂಕಾ ಜೆಡಿಎಸ್ ಅಧ್ಯಕ್ಷರಾದ ಬಿ ಡಿ ಪಾಟೀಲ ಉದ್ಘಾಟಿಸಿದರು.

ಇಂಡಿ ತಾಲ್ಲೂಕಿನ ಜೆಡಿಎಸ್ ಅಧ್ಯಕ್ಷರಾದ ಬಿ ಡಿ ಪಾಟೀಲ ಇಂಡಿ ನಗರದಲ್ಲಿ ಹಾಲುಮತ ಮಹಾಸಭಾ ಉದ್ಘಾಟಿಸಿ ಮಾತನಾಡಿದ ಅವರು
ಸರಕಾರ ಕೋಟ್ಯಂತರ ರೂ.ವೆಚ್ಚ ಮಾಡಿ ಶೈಕ್ಷಣಿಕ ಅನೇಕ ಯೋಜನೆ ಜಾರಿ ಮಾಡಿದರೂ ಗ್ರಾಮೀಣ ಮಕ್ಕಳು ಇನ್ನೂ ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಯಾದರೂ ಬಡ ಮಕ್ಕಳಿಗೆ, ಪೋಷಕರಿಗೆ ಸರಿಯಾದ ಮಾಹಿತಿ ಇಲ್ಲ. ಆಧುನಿಕ ಕಾಲದಲ್ಲಿಯೂ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಅಕ್ಷರಸ್ಥರು, ನೌಕರರು ಶಾಲೆಗೆ ಸೇರಿಸಲು ಶ್ರಮಪಡಬೇಕು ಎಂದು ಹೇಳಿದರು.

ನಂತರ ಹಾಲುಮತ ಮಹಾಸಭಾದ ಕರ್ನಾಟಕ ರಾಜ್ಯ ಸಂಚಾಲಕರಾದ ರಾಜಶೇಖರ ಕುರಿಯರ ಮಾತನಾಡಿ, ಆರ್ಥಿಕವಾಗಿ ಸದೃಢವಾಗಿರುವ ಕುರುಬ ಸಮಾಜ ರಾಜಕೀಯವಾಗಿ ದುರ್ಬಲವಾಗಿದೆ. ಸಮಾಜದ ಕೆಲವು ಮುಖಂಡರಲ್ಲಿ ಮನೆ ಮಾಡಿರುವ ದೇಷಭಾವ ಸಮಾಜಕ್ಕೆ ರಾಜಕೀಯ ಗಟ್ಟಿ ನೆಲ ಒದಗಿಸುವಲ್ಲಿ ವಿಫಲವಾಗಿದೆ ಎಂದರು. ಮಾಜಿ ಪೊಲೀಸ್ ಅಧಿಕಾರಿಗಳಾದ ಎಮ್ ಆರ್ ಭಾವಿಕಟ್ಟಿಯವರು ಮಾತನಾಡಿ ಹಾಲುಮತ ಸಮಾಜದ ಶೇ.೩೦ರಷ್ಟು ಗ್ರಾಮೀಣ ಮಕ್ಕಳು ಈಗಲೂ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಅಕ್ಷರಸ್ಥರು ಜಾಗೃತಿ ಮೂಡಿಸಬೇಕು ಎಂದು
ಹೇಳಿದರು.

ಇದೇ ಸಂದರ್ಭದಲ್ಲಿ ವಿಜಾಪೂರ ಜಿಲ್ಲಾ ಹಾಲುಮತ ಮಹಾಸಭಾದ ಅಧ್ಯಕ್ಷರಾದ ಕರೇಪ್ಪ ಬಸ್ತಾಳ ಅವರು ಮಾತನಾಡಿ ಇಂಡಿ ತಾಲ್ಲೂಕಿನ
ಹಾಲುಮತ ಮಹಾಸಭಾ ಅಧ್ಯಕ್ಷರಾಗಿ ಮಾಳು ರಾಮಣ್ಣ ಮ್ಯಾಕೇರಿ ಸಂಗೋಗಿ, ಉಪಾಧ್ಯಕ್ಷರಾಗಿ ರವಿಕಿರಣ್ ಕೆರುಟಗಿ ನಾದ ಬಿಕೆ ,ಪ್ರಧಾನ ಕಾರ್ಯದರ್ಶಿಯಾಗಿ ವಿಠ್ಠಲ ಹಳ್ಳಿ ಹೀರೆರೂಗಿ ,ಕಾರ್ಯದರ್ಶಿಯಾಗಿ ಕುಮಾರ್ ಸುರಗಿಹಳ್ಳಿ ಬಬಲಾದಿ, ಸಹ ಕಾರ್ಯದರ್ಶಿಯಾಗಿ ಮಳಗು ಪೂಜಾರಿ ಇಂಡಿ, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ ಸುರಪೂರ ಲಿಂಗದಳ್ಳಿ,
ಹಾಲುಮತ ಮಹಾಸಭಾದ ತಾಲ್ಲುಕಾ ಪತ್ರಿಕಾ ಮಾಧ್ಯಮ ಸಲಹೆಗಾರರಾಗಿ ಪರಸು ಬಿಸನಾಳ ಇವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಟ್ಟಿಂಗೇಶ್ವರ ಗದ್ದಿಗಿ ಪೂಜಾರಿಗಳಾದ ಮಲ್ಲಪ್ಪ ಪೂಜಾರಿ,ಜಟ್ಟೆಪ್ಪ ಪೂಜಾರಿ, ಶ್ರೀಶೈಲ ಗುನ್ನಾಪೂರ, ಸೂರ್ಯಕಾಂತ ಮ್ಯಾಕೇರಿ ,ತುಕಾರಾಮ ಮದರಿ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

error: