April 25, 2024

Bhavana Tv

Its Your Channel

ಬೆಳಗಾವಿ ಜಿಲ್ಲೆಯ ಪೆರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ತೆರವು ಮಾಡಿದನು ಖಂಡಿಸಿ ಮಾನ್ಯ ದಂಡಾಧಿಕಾರಿಗಳ ಮೂಲಕ ಮನವಿ.

ವಿಜಯಪುರ: ವಿಜಯಪೂರ ಜಿಲ್ಲೆ ಇಂಡಿ ತಾಲ್ಲೂಕಿನ ಸಂಗೊಳ್ಳಿ ರಾಯಣ್ಣ ಕ್ರಾಂತಿ ಸೇನೆಯ ವತಿಯಿಂದ ಬೃಹತ್ ಪ್ರತಿಭಟನೆಯ ಮೂಲಕ ಇಂಡಿ ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು. ನಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿಕಿರಣ್ ಕೆರುಟಗಿ ಮಾತನಾಡಿ
ಕಿತ್ತೂರು ಸಂಸ್ಥಾನದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ವೀರ ಮರಣವನ್ನು ಹೊಂದಿದ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಯನ್ನು ಬೆಳಗಾವಿ ನಂದಗಡ ಮಾರ್ಗವಾದ ಪೆರನವಾಡಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾ ಆಡಳಿತ ತೆರವುಗೊಳಿಸಿದ್ದು ಖಂಡನಾರ್ಹ ಕೃತ್ಯ ವಾಗಿರುತ್ತದೆ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಈವರೆಗೆ ನಾವು ಸ್ವಾತಂತ್ರ‍್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಸಂಗೊಳ್ಳಿ ರಾಯಣ್ಣ ಅವರ ಪುತ್ತಳಿ ಯನ್ನು ಮರುಸ್ಥಾಪಿಸಬೇಕು ಎಂದು ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನು ಕೊಡಲಾಯಿತು ಈ ಸಂದರ್ಭದಲ್ಲಿ ತಾಲೂಕು ಹಾಲುಮತ ಯುವ ಮುಖಂಡರಾದ ಶ್ರೀಶೈಲ ಗುನ್ನಾಪುರ, ವಿಠ್ಠಲ ಹಳ್ಳಿ, ಪುಂಡಲೀಕ ಹಳ್ಳಿ, ಮಹೇಶ್ ರೂಗಿ, ಚಂದ್ರಕಾoತ್ ತಾವರಖೇಡ, ಸಿಂಧೂ ಪೂಜಾರಿ,ಪರಸು ಬಿಸನಾಳ ತಾಂಬಾ, ಸಿದ್ದರಾಮ್ ರತ್ನಾಕರ, ಪರಸು ಹೊಸಮನಿ,ರಾಜು ಭಜಂತ್ರಿ, ಹಣಮಂತ ಪೂಜಾರಿ ,ಜಕ್ಕು ಮಾನವಿನಳ್ಳಿ, ಸಿದ್ದು ಪೂಜಾರಿ, ಭಾಗಿಯಾಗಿದ್ದರು.

ವರದಿ:ಬಿ ಎಸ್ ಹೊಸೂರ.

error: