April 16, 2024

Bhavana Tv

Its Your Channel

ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ಕಾಯಿದೆ ತಿದ್ದುಪಡಿ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಕರೋನಾ ಭ್ರಷ್ಟಾಚಾರದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ಸಿನ ಮುಖಂಡರಿoದ ಆಗ್ರಹ

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ಕಾಯಿದೆ ತಿದ್ದುಪಡಿ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕೆoದು ಹಾಗೂ ಕರೋನ ನಿಯಂತ್ರಣದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ದೇವರಹಿಪ್ಪರಗಿಯ ಕಾಂಗ್ರೆಸ್ಸಿನ ಮುಖಂಡರು ಆಗ್ರಹಿಸಿದರು

ಕೋರನ ನಿಯಂತ್ರಿಸಲು ಸರ್ಕಾರ ಖರೀದಿಸಿರುವ ಸಾಮಗ್ರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಕರ್ನಾಟಕ ಸರ್ಕಾರವು ಎಂಟು ವಿವಿಧ ಇಲಾಖೆಗಳಿಂದ ೪೧೬೭ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ಸಿನ ಮುಖಂಡರಾದ ಬಿಎಸ್ ಪಾಟೀಲ್ ಯಾಳಗಿ ಆರೋಪಿಸಿದರು .
ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಹ ಸಲ್ಲಿಸಿದರು
ಬಿಜೆಪಿಯ ವಿರುದ್ಧ ಹೋರಾಟದಲ್ಲಿ ಬಿಎಸ್ ಪಾಟೀಲ್ ಯಾಳಗಿ ನಿಂಗನಗೌಡ ಪಾಟೀಲ್ ಬಾಳನಗೌಡ ಪಾಟೀಲ್ ರಮೇಶ ದಳವಾಯಿ ಹಾಲಪ್ಪಗೌಡ ಚೌದ್ರಿ ದೇವರ ಹಿಪ್ಪರಗಿಯ ಕಾಂಗ್ರೆಸ್ಸಿನ ಮುಖಂಡರು ಭಾಗವಹಿಸಿದ್ದರು

ವರದಿ. ಬಿ ಎಸ್ ಹೊಸೂರ.

error: