April 22, 2021

Bhavana Tv

Its Your Channel

ಶ್ವಾನಗಳ ಓಟದ ಸ್ಪರ್ದೆ ಜರುಗಿತು.

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ ರೈಲು ನಿಲ್ದಾಣದಲ್ಲಿ ದಿವಂಗತ ಕುಮಾರಿ ಸಂಜೀವಿನಿ ರಾ ಜಾಧವ ಇವಳ ಪುಣ್ಯತಿಥಿ ಸ್ಮರಣಾರ್ಥ ರಾಷ್ಟ್ರ ಮಟ್ಟದ ಶ್ವಾನಗಳ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.ಕರ್ನಾಟಕ , ಮಹಾರಾಷ್ಟ್ರ, ಪಂಜಾಬ, ಗುಜರಾತ ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಗಳಿಗೆ ಸೇರಿದ ಶ್ವಾನಗಳು ಆಗಮಿಸಿದ್ದವು…. ದೇವಿಚಂದ ಗಂಗಾರಮ ಜಾಧವ ಪ್ರಥಮ ದರ್ಜೆ ಗುತ್ತಿಗೆದಾರರು ಇವರು ಪ್ರಥಮ ಬಹುಮಾನ ಬಜಾಜ ಕಂಪನಿಯ ಮೊಟರ ಸೈಕಲ್ ಹಾಗೂ ಪಾರಿತೋಷಕ ಒಳಗೊಂಡ ಕ್ರೀಡೆ ಅನ್ನಪ್ರಸಾದ ಇಡುವ ಮೂಲಕ ನಡೆಸಿದರು. ಕ್ರೀಡೆಯ ಕಮಿಟಿಯಲ್ಲಿ ಮಾಜಿ ಭತಗುಣಕಿ ಅಧ್ಯಕ್ಷ ಶ್ರೀ ಸಿದ್ಧು ಸಾಹುಕಾರ ನಿಚ್ಚಳ, ಚಿಕ್ಕಬೆವನೂರ ಗ್ರಾಮ ಪಂಚಾಯತ ಉಪಾಧ್ಯಕ್ಷರ ಹಾಗೂ ರೈಲ್ವೆ ಅಭಿವೃದ್ಧಿ ಹೋರಾಟಗಾರ ಕಿರುತೆರೆ ಕಲಾವಿದ ,ನಿರ್ದೇಶಕ ಶ್ರೀ ವೆಂಕಟೇಶ ಅ ಭೈರಾಮಡಗಿ ಚಿಕ್ಕಬೆವನೂರ ಗ್ರಾಮ ಪಂಚಾಯತ ಸದಸ್ಯ ಶ್ರೀ ಸುನೀಲ ಸಿ ಚವ್ಹಾಣ, ಗ್ರಾಮ ಮುಖಂಡರಾದ ವೆಂಕಣ್ಣಾ ಸಿ ಭೈರಾಮಡಗಿ, ಮಹಾದೇವ ಲಮಾಣಿ , ದಿಲಿಪ ಜಾಧವ ಮಲ್ಲಿಕಾರ್ಜುನ ಸಿ ಭೈರಾಮಡಗಿ ನಿರ್ಣಾಯಕ ಕಮಿಟಿಯ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಪ್ರಥಮ ಬಹುಮಾನ ಮಹಾರಾಷ್ಟ್ರದ ಸಾತರಾದ ಶ್ರೀ ತುಳಜಾ ಭವಾನಿ ಗ್ರೂಪ ಮಾಲೀಕರು ಪಡೆದು ಕೊಂಡರು.ಚಿಕ್ಕಬೆವನೂರ ಗ್ರಾಮ ಪಂಚಾಯತ ಉಪಾಧ್ಯಕ್ಷರು ಹಾಗೂ ರೈಲ್ವೇ ಅಭಿವೃಧ್ಧಿ ಹೋರಾಟಗಾರ ವೆಂಕಟೇಶ ಅ ಭೈರಾಮಡಗಿ ಹಾಗೂ ಸದಸ್ಯ ಸುನೀಲ ಸಿ ಚವ್ಹಾಣ ಇವರೂ ಕೂಡಾ ಧನ ಸಹಾಯ ಹಾಗೂ ಪಾರಿತೋಷಕ ನೀಡಿ ಗೌರವಿಸಿದರು.

error: