May 11, 2021

Bhavana Tv

Its Your Channel

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ಅಧ್ಯಕ್ಷರಾಗಿ ಭಾಗಮ್ಮ ಕುರತಳ್ಳಿ ನೇಮಕ.

ಇಂಡಿ: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ರಾಜಾಧ್ಯಕ್ಷರ ಅಧ್ಯಕ್ಷತೆ ಮೇರೆಗೆ ದಿನಾಂಕ ೧೯-೪-೨೦೨೧ ರಂದು ಸಭೆಯಲ್ಲಿ ಭಾಗಮ್ಮ ಸಿದ್ರಾಮಪ್ಪ ಕುರತಳ್ಳಿ ಇವರನ್ನು ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಾ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆದೇಶ ಪತ್ರವನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ರಾಜಾಧ್ಯಕ್ಷರಾದ ಎನ್ ಎಸ್ ಬೊರಾವತ ರವರು ಆದೇಶ ಪತ್ರವನ್ನು ನೀಡಿದರು. ನಂತರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಭಾಗಮ್ಮ ಕುರತಳ್ಳಿ ಮಾತನಾಡಿಇಂಡಿ ತಾಲೂಕಿನಲ್ಲಿರುವ ಪ್ರತಿಯೊಂದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಯಾವುದೇ ಸಮಸ್ಯೆ ಬಂದಲ್ಲಿ ತಕ್ಷಣ ಅವರ ಸಮಸ್ಯೆಗಳನ್ನು ಬಗೆ ಹರಿಸುವೆ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ತಾಲೂಕ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಆದರೆ ನಾನು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಜೊತೆಯಲ್ಲಿ ಇದ್ದು ಅವರ ಯಾವುದೇ ಸಮಸ್ಯೆಗಳು ಬಂದರೆ ಆ ಸಮಸ್ಯೆ ಬಗೆ ಹರಿಸುತ್ತೆನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾಗಮ್ಮ ಕುರತಳ್ಳಿ. ಪ್ರಭಾವತಿ ಬಿರಾದಾರ, ಸಾವಿತ್ರಿ ಮೊಟಗಿ. ಸುರೇಖಾ ದೊಡಮನಿ. ಗೀತಾ ಜಾಧವ. ಸರುಬಾಯಿ ರಾಠೋಡ, ಆಶಾ ರಾಠೋಡ, ಭಾರತಿ ಪವಾರ, ವೀಣಾ ಕೆಂಗನಾಳ, ನಂದಾ ಮಹೆಂದ್ರಕರ, ಸವಿತಾ ರಾಠೋಡ, ನಪಿಷಾ ಮುಲ್ಲಾ. ಹಮಿದಾ ಮುದ್ದರಕಿ ಮತ್ತಿತರರು ಇದ್ದರು.

ವರದಿ. ಬಿ ಎಸ್ ಹೊಸೂರ.

error: