March 25, 2024

Bhavana Tv

Its Your Channel

ಸರಕಾರಿ ಆಸ್ಪತ್ರೆಯ ನಿರ್ಲಕ್ಷತನದಿಂದ ಕುಡಿಯುವ ನೀರು ಕಲುಷಿತ ನೀರಾಗುತ್ತಿದೆ : ಅನೀಲಗೌಡ ಬಿರಾದಾರ ಪುರಸಭೆ ಸದಸ್ಯ

ವಿಜಯಪುರ : ಜಿಲ್ಲೆಯ ಇಂಡಿ ಪಟ್ಟಣದ ತಾಲ್ಲೂಕು ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷತನದಿಂದ ಕುಡಿಯುವ ನೀರು ಕಲುಷಿತ ನೀರಾಗುತ್ತಿದೆ ಎಂದು ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಸುದ್ದಿಗಾರರೊಂದಿಗೆ ಮಾತಾನಾಡಿದರು.


ಇಂಡಿ ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್ ಕುರಿತು ಆರೋಗ್ಯ ಇಲಾಖೆಯವರು ಏನೆಲ್ಲಾ ಕ್ರಮ ತೆಗೆದುಕೊಂಡಿದ್ದಾರೆAದು ಪರಿಶೀಲಿಸಿದರು. ತದನಂತರ ಸರಿ ಸುಮಾರು ೫೦ ಸಾವಿರ ನಗರ ವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಘಟಕದತ್ತ ಪರಿಶೀಲನೆ ಮಾಡಿದರು.ಆದರೆ ಸರಕಾರಿ ಆಸ್ಪತ್ರೆಯ ಹಿಂಬಾಗದಲ್ಲಿರುವ ಕುಡಿಯುವ ನೀರಿನ ಘಟಕಕ್ಕೆ ಹೆಚ್ಚಿನದಾಗಿ ಸರಕಾರಿ ಆಸ್ಪತ್ರೆಯ ತ್ಯಾಜ್ಯ ಮತ್ತು ಇನ್ನಿತರೆ ಕಚ್ಚಾ ವಸ್ತುಗಳು ಸುಡೊದರಿಂದ ಎಲ್ಲಾ ಕರಕಲು ನೀರಿನ ಘಟಕದಲ್ಲಿ ಬೀಳೊದರಿಂದ ನಗರದ ಜನರ ಆರೋಗ್ಯ ಏರುಪೇರು ಗೊಳ್ಳುತ್ತಿದೆ. ಇದಕ್ಕೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಧಿಕಾರಿಗಳೆ ನಿರ್ಲಕ್ಷ್ಯ ವೇ ಕಾರಣ ಎಂದರು.

ವರದಿ ಬಿ ಎಸ್ ಹೊಸೂರ

error: