December 22, 2024

Bhavana Tv

Its Your Channel

ಆಶ್ರಿತ ರೋಗಗಳ ನಿಯಂತ್ರಾಧಿಕಾರಿ ರಮೇಶ ರಾವ್ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಕಡ್ನೀರ ಬೇಟಿ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಹೊನ್ನಾವರ: ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರು ಭಾಗದಲ್ಲಿ ವಿಪರೀತವಾಗಿ ಡೆಂಗ್ಯೂ ಲಕ್ಷಣ, ಶೀತ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಾಧಿಕಾರಿ ರಮೇಶ ರಾವ್ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಅವರು ಮಂಗಳವಾರ ಗ್ರಾಮಸ್ಥರ ಆರೋಗ್ಯ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಡ್ನೀರು ಭಾಗದಲ್ಲಿ ತೀವ್ರ ಜ್ವರ, ಶೀತದಿಂದ ಜನರು ಕಂಗಾಲಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಆರೋಗ್ಯಾಧಿಕಾರಿಗಳ ತಂಡ ದಿಢೀರ್ ಬೇಟಿ ನೀಡಿ ಜನರ ಆರೋಗ್ಯ ಸ್ಥಿತಿಗತಿಗಳನ್ನು ವಿಚಾರಿಸಿತು. `ಕಡ್ನೀರು ಭಾಗದಲ್ಲಿ ೧೩೦ ಮನೆಗಳಿದ್ದು, ೪೦೦ ಜನಸಂಖ್ಯೆ ಹೊಂದಿದೆ. ಈ ಭಾಗದಲ್ಲಿ ನಿಖರವಾಗಿ ಯಾವ ರೋಗ ಜನರನ್ನು ಕಾಡುತ್ತಿದೆ ಎಂದು ತಿಳಿಯಲು ತುರ್ತಾಗಿ ರಕ್ತ ಪರೀಕ್ಷೆ ಹಾಗೂ ಕೋವಿಡ್ ಟೆಸ್ಟ್ ಮಾಡಬೇಕು. ಬುಧವಾರದಿಂದ ಕಡ್ನೀರು ಭಾಗದ ಪ್ರತಿಯೊಬ್ಬರ ಗಂಟಲು ದ್ರವ ಪರೀಕ್ಷೆ ಮಾಡಿಸುವುದು ಕಡ್ಡಾಯ. ಮೊದಲ ಹಂತದಲ್ಲಿ ಪ್ರತಿಯೊಬ್ಬರ ಕೋವಿಡ್ ರ‍್ಯಾಪಿಡ್ ಟೆಸ್ಟ್ ಮಾಡಿಸಬೇಕು. ಈ ಪರೀಕ್ಷೆಯಲ್ಲಿ ಕರೋನಾ ಲಕ್ಷಣಗಳು ಕಂಡುಬAದಲ್ಲಿ ಅಂತವರಿಗೆ ರಕ್ತ ಪರೀಕ್ಷೆ ಅವಶ್ಯಕತೆ ಇರುವುದಿಲ್ಲ. ಯಾರಿಗೆ ಕೋವಿಡ್ ರ‍್ಯಾಪಿಡ್ ಟೆಸ್ಟ್ನಲ್ಲಿ ಋಣಾತ್ಮಕ ಅಂಶ ಕಂಡುಬAದಲ್ಲಿ ಅವರನ್ನು ರಕ್ತಪರೀಕ್ಷೆಗೊಳಪಡಿಸಬೇಕು. ವ್ಯಕ್ತಿಗೆ ರೋಗ ಲಕ್ಷಣ ಇಲ್ಲದೆಯೂ ಕರೋನಾ ಪಾಸೀಟೀವ್ ಬರುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಯೊಬ್ಬರ ಕೋವಿಡ್ ಟೆಸ್ಟ್ ಅವಶ್ಯವಾಗಿ ಮಾಡಿಸಬೇಕು ಎಂದರು. 

ಯಾರಿಗೆ ಕರೋನಾ ಪಾಸೀಟೀವ್ ಇದೆ ಅವರಿಗೆ ಮಾತ್ರೆಗಳನ್ನು ನೀಡಿ. ಸಕ್ಕರೆ ಕಾಯಿಲೆ ಪರೀಕ್ಷೆಯನ್ನೂ ಮಾಡಿಸಬೇಕು. ಕರೋನಾ ಇರುವವರು ಹೋಮ್ ಐಷೋಲೇಷನ್‌ನಲ್ಲಿ ಇರುತ್ತಾರೆ ಅಂತವರಿಗೂ ಸಕ್ಕರೆ ಖಾಯಿಲೆ ಬಗ್ಗೆಯೂ ಪರೀಕ್ಷೆ ಮಾಡಿ ವರದಿ ನೀಡಬೇಕು. ಸಕ್ಕರೆ ಖಾಯಿಲೆ ಪ್ರಮಾಣ ಜಾಸ್ತಿ ಇದ್ದರೆ ಅಂತವರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‌ಗೆ ಕಳಿಸಬೇಕು ಎಂದು ಆಶಾ ಕಾರ್ಯಕರ್ತೆ ಶೈಲಾ ನಾಯ್ಕ ಅವರಿಗೆ ಸೂಚಿಸಿದರು.

ಮಳೆ ಇಲ್ಲದ ಸಮಯವನ್ನು ನಿಗದಿಪಡಿಸಿಕೊಂಡು ಕಡ್ನೀರು ಭಾಗಕ್ಕೆ ಫಾಗ್ಗಿಂಗ್ ಮಾಡಬೇಕು. ಸ್ಥಳೀಯ ಪಂಚಾಯಿತಿಗೆ ಭೇಟಿ ನೀಡಿ ಕೂಡಲೇ ಡೀಸೆಲ್ ಇತ್ಯಾದಿ ನೀಡುವಂತೆ ಹೇಳಿ. ಎಲ್ಲಾ ಮನೆಗಳಿಗೂ ಇನ್‌ಡೋರ್ ಫಾಗ್ಗಿಂಗ್ ಮಾಡಬೇಕು ಎಂದು ಆರೋಗ್ಯ ನಿರೀಕ್ಷಕ ಆನಂದ ಅವರಿಗೆ ಸೂಚಿಸಿದರು.

ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿರುವ ಈ ಸಮಯದಲ್ಲಿ ಹೊರ ಜಿಲ್ಲೆಗಳಿಂದ ಬರುವವರ ಬಗ್ಗೆ ಸ್ಥಳೀಯರು ಹೆಚ್ಚು ನಿಗಾ ವಹಿಸಿ ಸಂಬAಧಪಟ್ಟ ಆರೋಗ್ಯ ಇಲಾಖೆಗೆ, ಪೊಲೀಸ್ ಇಲಾಖೆಗೆ ಕೂಡಲೆ ಮಾಹಿತಿ ನೀಡಬೇಕು. ಈ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸುವುದು ಉತ್ತಮ.
ಯಾರು ಜ್ವರ ಇತ್ಯಾದಿ ಕಾಯಿಲೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರ ರಕ್ತ ಮತ್ತು ಕೊವಿಡ್ ಪರೀಕ್ಷೆ ತಕ್ಷಣ ಮಾಡಿಸಬೇಕು. ಕಡ್ನೀರಿನಲ್ಲಿ ಎಲ್ಲಾ ಭಾಗಕ್ಕೂ ಭೇಟಿ ನೀಡಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಾಗಿದ್ದು, ಇದ್ದಕ್ಕೆ ಒಂದು ಪ್ರತ್ಯೇಕ ಮೊಬೈಲ್ ಟೀಂ ಮಾಡಲಾಗುವುದು. ಟೀಂನಲ್ಲಿ ಲ್ಯಾಬ್ ಟೆಕ್ನಿಶನ್, ಮೆಡಿಕಲ್ ಆಫೀಸರ್ ಸೇರಿ ಮೂವರು ಸಿಬ್ಬಂದಿಗಳು ಇರುತ್ತಾರೆ. ಪ್ರತಿಯೊಬ್ಬರ ಪರೀಕ್ಷೆ ಮಾಡಿಸಿ ವರದಿ ನೀಡಬೇಕು. ಇದಕ್ಕೆ ಬುಧವಾರವೇ ಅಗತ್ಯ ಕ್ರಮ ಕೈಗೊಳ್ಳಬೇಕು. ಕಡ್ನೀರು ಭಾಗದ ಎಲ್ಲಾ ಜನರನ್ನೂ ಪರೀಕ್ಷೆಗೊಳಪಡಿಸಿ ಶೀಘ್ರವಾಗಿ ಮಾಹಿತಿ ನೀಡುವುದು ಹಾಗೂ ಎಲ್ಲಾ ಮನೆಗಳನ್ನೂ ಸ್ಕಿçÃನ್ ಮಾಡುವಂತೆ ಕ್ರಮ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಆನಂದ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶಾಂತಿ ನಾಯ್ಕ, ಪ್ರಯೋಗಾಲಯ ತಂತ್ರಜ್ಞೆ ತಾರಾ, ಆಶಾ ಕಾರ್ಯಕರ್ತೆ ಶೈಲಾ ನಾಯ್ಕ ಇದ್ದರು.

error: