ಎಲ್.ಆರ್.ಎಲ್.ಎಂ ಯೋಜನೆಯಡಿ ಯಲ್ವಡಿ ಕವೂರ ಗ್ರಾಮ ಪಂಚಾಯತ ಆವರಣದಲ್ಲಿ ಶ್ರೀ ಮಹಾಸತಿ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಗ್ರಾಮ ಪಂಚಾಯತ ಯಲ್ವಡಿ ಕವೂರ ಇವರ ಸಂಯುಕ್ತ ಆಶ್ರಯದಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ “ನಡೆಯಿತು. ಕಾರ್ಯಕ್ರಮವನ್ನು ಭಟ್ಕಳ ವಲಯ ಅರಣ್ಯಾಧಿಕಾರಿಯಾದ ಸವಿತಾ ದೇವಾಡಿಗ,ಉದ್ಘಾಟನೆ ನೆರವೇರಿಸಿದರು ನಂತರ ಮಾತನಾಡಿ ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ ,ಹೆಣ್ಣು ಜೀವನದಲ್ಲಿ ಹೆಂಡಿತಿಯಾಗಿ,ತಾಯಿಯಾಗಿ ,ಮಗಳಾಗಿ ,ಸ್ನೇಹಿತೆಯಾಗಿ ,ಅಧಿಕಾರಿಯಾಗಿ ಎಲ್ಲಾ ಪಾತ್ರಕ್ಕೂ ಸೈ ಅನಿಸಿದ್ದಾಳೆ, ಇದೆ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ಮಹಿಳೆಯರು ಕೋಗೊಳ್ಳಬೇಕಾದ ಕ್ರಮಗಳು ಮತ್ತು ಅರಣ್ಯ ಅತಿಕ್ರಮಣದ ಬಗ್ಗೆ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿಯಾದ ಶಾರದ ನಾಯ್ಕರವರು ಇಲಾಖೆಯಲ್ಲಿ ಸಿಗುವಂತಹ ಎಲ್ಲಾ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಭಟ್ಕಳ ;ತಾಲೂಕಾ ಪಂಚಾಯತ ಎಲ್.ಆರ್.ಎಲ್.ಎಂ ಯೋಜನೆಯ ವಲಯ ಮೇಲ್ವೀಚಾರಕರಾದ ಗೋಪಾಲ ನಾಯ್ಕರವರು ಸಂಜೀವಿನಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ನಂತರ ಯಲ್ವಡಿ ಕವೂರಗ್ರಾಮ ಪಂಚಾಯತ ಅಧ್ಯಕ್ಷರಾದ ಸುಶೀಲಾ ನಾಯ್ಕ, ಧಾರ್ಮೀಕ ಮುಖಂಡರಾದ ಭಾಸ್ಕರ ನಾಯ್ಕ ವಕೀಲರಾದ ಮಾಸ್ತಿ ನಾಯ್ಕ ಪಿ.ಡಿ.ಓ ನಾಗರಾಜ ಬಿ.ಜಿ ಇಲಾಖಾವಾರು ಸೂಕ್ತ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿಯಾದ ನಾಗಮ್ಮ ಈರಪ್ಪ ನಾಯ್ಕ ಹಾಗೂ ಸ್ಥಳೀಯ ಪ್ರತಿಭೆ ಗಾಯಕಿಯಾದ ಪವಿತ್ರ ನಾಯ್ಕರವರಿಗೆ ಸನ್ಮಾನಿಸಿ ಗೌರವಿಸಿದರು. ಮಹಿಳಾ ದಿನಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ ಆಟೋಟ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಆರೋಗ್ಯ ಸಹಾಯಕಿ,ಒಕ್ಕೂಟದ ಅಧ್ಯಕ್ಷರಾದ ಸುಶೀಲಾ ನಾಯ್ಕ, ಹಡೀನ ಸರ್ಕಾರಿ.ಹಿರಿಯ. ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕಿ,ಅಂಗನವಾಡಿ ಕಾರ್ಯಕರ್ತರು,ಆಶಾ ಕಾರ್ಯಕರ್ತರು,ಎಂ.ಬಿ.ಕೆ ಎಲ್.ಸಿ.ಆರ .ಪಿ,ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.