December 22, 2024

Bhavana Tv

Its Your Channel

ಪೌರಡಳಿತ ಮತ್ತು ತೋಟಗಾರಿಕೆ ಸಚಿವರಾದ ನಾರಾಯಣಗೌಡ ಬಸ್ಸು ಚಲಾಯಿಸುವ ಮೂಲಕ ಮಂಗಳವಾರ ಚಾಲನೆ ನೀಡಿದರು.

ಮಂಡ್ಯ ಕೃಷ್ಣರಾಜಪೇಟೆ ಗ್ರಾಮರಕ್ಷಕ ಶ್ರೀ ಹನುಮಂತರಾಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಡ್ಯದಿAದ ಮಹಾರಾಷ್ಟ್ರ ರಾಜ್ಯದ ರಾಜಧಾನಿ ವಾಣಿಜ್ಯ ನಗರಿ ಮುಂಬೈಗೆ ಪ್ರತಿನಿತ್ಯ ಸಂಚರಿಸುವ “ನಲ್ಲೂರಸಿರಿ” “ಶ್ರೀಕೃಷ್ಣಟ್ರಾವೆಲ್ಸ್”ನ ಎರಡು ಬಸ್ ಸಂಚಾರ ನಡೆಸಲು ಚಾಲನೆ ನೀಡಿದರು
ಈ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಒಡೆಯುವ ಸಮಯದಲ್ಲಿ ಕೈಯಲ್ಲಿರುವ ಬಂಗಾರದ ಉಂಗುರ ಮಿಸ್ ಆಗಿದೆ. ಸಚೀವರಿಗೆ ಗಮನಕ್ಕೆ ಬಂದು ಕೂಡಲೇ ಹುಡುಕಲು ಆರಂಭಿಸಿದ್ದರು. ಒಂದು ಕ್ಷಣ ಸ್ಥಳದಲ್ಲಿದ್ದವರು ಸಚೀವರು ತೆಂಗಿನ ಕಾಯಿ ಭಾಗ ಹುಡುಕುತ್ತಿದ್ದಾರೊ ಎಂದು ಗೊಂದಲಕ್ಕೆ ಕಾರಣರಾದರು ವಿಷಯ ತಿಳಿದ ಬಳಿಕ ಸ್ಥಳದಲ್ಲಿದ್ದವರೆಲ್ಲ ಹುಡುಕಲು ಪ್ರಾರಂಭಿಸಿದಾಗ ಬಂಗಾರದ ಉಂಗುರ ಪತ್ತೆಯಾಯಿತು.

ಬಂಗಾರದ ಉಂಗುರ ಪತ್ತೆ


ಮುಂಬೈ ಮಹಾನಗರದಲ್ಲಿ ೨೫ಲಕ್ಷಕ್ಕೂ ಹೆಚ್ಚಿನ ಕನ್ನಡಿಗರಿದ್ದು ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ, ನಾಗಮಂಗಲ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನ ಜನರೆ ೨೫ಸಾವಿರಕ್ಕೂ ಹೆಚ್ಚಿದ್ದು ಮುಂಬೈ ನಗರದಲ್ಲಿ ಉದ್ಯಮಿಗಳಾಗಿ ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ಪುರಸಭೆಯ ಸದಸ್ಯರಾದ ಶೋಭಾದಿನೇಶ್ ದಂಪತಿಗಳು ಹೊಸದಾಗಿ ಮುಂಬೈ ಮಹಾನಗರಕ್ಕೆ ಸುಸಜ್ಜಿತ ಸ್ಲೀಪರ್ ಕೋಚ್ ಬಸ್ಸುಗಳನ್ನು ಆರಂಬಿಸಿರುವುದರಿAದ ಮುಂಬೈ ಕನ್ನಡಿಗರಿಗೆ ಬಹಳ ಅನುಕೂಲವಾಗಲಿದ್ದು ವ್ಯಾಪಾರ ವ್ಯವಹಾರಕ್ಕೆ ಅನುಕೂಲವಾಗಲಿದೆ. ಆದ್ದರಿಂದ ನೂತನ ಮುಂಬೈ ಬಸ್ಸುಗಳು ಚೆನ್ನಾಗಿ ಚಾಲನೆಯಾಗಲಿ. ಮುಂದಿನ ದಿನಗಳಲ್ಲಿ ದಿನೇಶ್ ನೂರಾರು ಬಸ್ಸುಗಳ ಒಡೆಯರಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುವಂತಾಗಲಿ ಎಂದು ಸಚಿವ ನಾರಾಯಣಗೌಡ ಶುಭ ಹಾರೈಸಿದರು.

ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಜಿಲ್ಲಾ ಪಂಚಾಯತ ಮಾಜಿಸದಸ್ಯ ಅಘಲಯ ಮಂಜುನಾಥ್, ಪುರಸಭೆಯ ಸದಸ್ಯರಾದ ಶುಭಾಗಿರೀಶ್, ಮಹಾದೇವಿನಂಜುAಡ, ಕೋಳಿ ನಾಗರಾಜು, ಇಂದ್ರಾಣಿ ವಿಶ್ವನಾಥ್, ಶಾಮಿಯಾನ ತಿಮ್ಮೇಗೌಡ, ಉಧ್ಯಮಿ ಅರುಣ್ ಕುಮಾರ್, ಯುವನಾಯಕ ಹೊಸಹೊಳಲು ಸುರೇಶ್, ಹೆಚ್.ಎನ್. ಪ್ರವೀಣ್, ಹೆಚ್.ಡಿ.ಅಶೋಕ್, ಕೆ.ಆರ್.ಹೇಮಂತಕುಮಾರ್, ಹಾದನೂರುಪರಮೇಶ್, ಸುರೇಶ್, ಕರ್ತೇನಹಳ್ಳಿ ಸುರೇಶ್, ಹನುಮಂತರಾಜ್ ಸೇರಿದಂತೆ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

error: