ಹೊನ್ನಾವರ ಎ. ೦೭ : ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಅನ್ವಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯಬಹುದಾದ ೨೯೧ ವಿಧದ ಚಿಕಿತ್ಸೆಯನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲೂ ಪಡೆಯಬಹುದಾಗಿದೆ. ಕೋವಿಡ್ ೧೯ ಸಮಸ್ಯೆಯಿಂದಾಗಿ ಕೆಲವು ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿರುವುದರಿಂದ ಆಯುಷ್ಮಾನ್ ಮತ್ತು ಆರೋಗ್ಯ ಕರ್ನಾಟಕ ಚಿಕಿತ್ಸೆ ಪಡೆಯಲು ಅರ್ಹರಾದವರಿಗೆ ತೊಂದರೆಯಾಗಬಾರದೆAದು ತುರ್ತು ಈ ಆದೇಶ ಹೊರಡಿಸಲಾಗಿದೆ.
ಸಿಜೇರಿಯನ್, ಹರ್ಣಿಯಾ ಮೊದಲಾದ ೨೯೧ ವಿಧದ ಚಿಕಿತ್ಸೆಗಳನ್ನು ತಮ್ಮ ಕಾರ್ಡ ಹಾಜರುಪಡಿಸಿ ಪಡೆಯಲು ಅವಕಾಶವಿದೆ. ಹೊನ್ನಾವರದ ಸೇಂಟ್ ಇಗ್ನೇಷಿಯಸ್, ಶಾರದಾ ನರ್ಸಿಂಗ್ ಹೋಂ, ವಿಕೆಬಿ ಬಳಕೂರ ಸ್ಮಾರಕ ಆಸ್ಪತ್ರೆ, ಆರ್.ಎನ್. ಶೆಟ್ಟಿ ಆಸ್ಪತ್ರೆ ಮುರ್ಡೇಶ್ವರ, ಟಿಎಸ್‌ಎಸ್ ಆಸ್ಪತ್ರೆ ಶಿರ್ಸಿ, ನಾಗಮಂಗಲ ಆಸ್ಪತ್ರೆ ಕಾರವಾರ, ಸಹಿತ ೧೦ ಆಸ್ಪತ್ರೆಗಳು ನೋಂದಾಯಿಸಿಕೊAಡಿದ್ದು ಇನ್ನೂ ಕೆಲವು ಆಸ್ಪತ್ರೆಗಳು ನೋಂದಾಯಿಸಿಕೊಳ್ಳಬೇಕಾಗಿವೆ. ಇದರಿಂದಾಗಿ ಮಧ್ಯಮಸ್ಥರದ ಎಲ್ಲ ಚಿಕಿತ್ಸೆಗಳನ್ನು ನೇರ ಇಲ್ಲಿ ಪಡೆಯಬಹುದು. ಇದರಿಂದ ಉತ್ತರ ಕನ್ನಡದ ಜನತೆಗೆ ಉಪಯೋಗವಾಗಲಿದೆ. ವಿವರಗಳಿಗೆ ೮೫೫೩೮೦೮೬೪೬ ವಿವರ ಪಡೆಯಬಹುದು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.