ಗುಂಡ್ಲಪೇಟೆ ; ಮೈಸೂರು. ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯ ಶಿಕ್ಷಣ ಮಂಡಳಿಯ ಮೂರನೇ ಸಾಮಾನ್ಯ ಸಭೆಯಲ್ಲಿ ಈ ಸಂಬAಧ ಚರ್ಚೆ ನಡೆದು ಕಾನೂನು ವಿಷಯದ ಡೀನ್ ಪ್ರೊ ರಮೇಶ್ ಸಭೆಯ ನಡಾವಳಿಯನ್ನು ಮಂಡಿಸಲು ಅನುಮತಿ ಕೋರಿದ್ದು. ಈ ವೇಳೆ ಆಕ್ಷೇಪಣೆ ವ್ಯಕ್ತಪಡಿಸಿದ ವಿವಿ ಶೈಕ್ಷಣಿಕ ಮಂಡಳಿಯ ನಾಮನಿರ್ದೇಶಿತ ಸದಸ್ಯರಾದ ಎಂ ಸಿ ರಾಜಶೇಖರ ಮಾತನಾಡಿ ಕಾನೂನು ಓದುವ ಮಕ್ಕಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಲ್ಲ ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ ಇಂಜಿನಿಯರಿAಗ್ ಮೆಡಿಕಲ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ. ಅಲ್ಲದೆ ಎಷ್ಟೋ ನ್ಯಾಯಮೂರ್ತಿಗಳು ಕನ್ನಡದಲ್ಲಿ ತೀರ್ಪನ್ನು ಬರೆಯುತ್ತಾರೆ. ಹೀಗಿರುವಾಗ ಕಾನೂನು ವಿಷಯಕ್ಕೆ ಮಾತ್ರ ಇಂಗ್ಲಿಷ್ ಮಾಧ್ಯಮವೇ ಎಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರೊ.ರಮೇಶ್ ವಿವಿಯಲ್ಲಿ 1973ರಿಂದ ಕಾನೂನು ವಿಭಾಗ ಕಾರ್ಯನಿರ್ವಹಿಸುತ್ತಿದ್ದು ಈವರೆಗೆ ಸ್ನಾತಕೋತ್ತರ ಪದವಿಯಲ್ಲಿ ಇಂಗ್ಲಿಷನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಸ್ನಾತಕಪೂರ್ವ ದಲ್ಲಿ 2008ರವರೆಗೆ ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಪರೀಕ್ಷೆ ಬರೆದಿದ್ದರು. ನಂತರ ಬದಲಾದ ನಿಯಮಾವಳಿ ಯಿಂದ ಕಾನೂನು ಪದವಿ ಇಂಗ್ಲಿಷ್ ಮಾಧ್ಯಮದ ಆಗಿ ಪರಿವರ್ತನೆ ಆಯಿತು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿದರೆ ಪಾಠವನ್ನು ಕನ್ನಡದಲ್ಲಿ ಮಾಡಿ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿಯುತ್ತಾರೆ ಆದರೆ ಕನ್ನಡದಲ್ಲಿ ಅಧ್ಯಯನಕ್ಕೆ ಗುಣಮಟ್ಟದ ಪುಸ್ತಕಗಳಿಲ್ಲ ಅಂತಹ ಪುಸ್ತಕಗಳನ್ನು ಅಧ್ಯಯನ ಮಾಡಿದರೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಕಡಿಮೆಯಾಗುತ್ತದೆ. ಹೀಗಾಗಿ ಇಂಗ್ಲಿಷ್ ಮಾಧ್ಯಮಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ ಸಿ ರಾಜಶೇಖರ್ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬರೆಯುವ ಹಕ್ಕನ್ನು ಮೊಟಕುಗೊಳಿಸಬಾರದು. ಬೆಂಗಳೂರು ಕಾನೂನು ವಿವಿಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಕನ್ನಡದಲ್ಲಿ ಪುಸ್ತಕಗಳು ಲಭ್ಯವಿಲ್ಲ ಎಂದರೆ ಮೈಸೂರು ವಿವಿ ಇಂದಲೇ ತಜ್ಞರನ್ನು ನೇಮಿಸಿ ಇಂಗ್ಲೀಷ್ ಪುಸ್ತಕದ ಅನುವಾದ ಮಾಡಿಕೊಡಬೇಕು ಎಂದರು. ಇದಕ್ಕೆ ಇತರ ಸದಸ್ಯರಿಂದಲೂ ಬೆಂಬಲ ವ್ಯಕ್ತವಾಯಿತು ಈ ಸಂದರ್ಭದಲ್ಲಿ. ಪರ ಮತ್ತು ವಿರೋಧ ಚರ್ಚೆಗಳು ನಡೆದವು ಇದಕ್ಕೆ ಕುಲಪತಿಗಳಾದ ಹೇಮಂತ್ ಕುಮಾರ್ ರವರು ಅನುಮತಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಶಿವಕುಮಾರ್, ಶಶಿಕುಮಾರ್ ,ಪ್ರಶಾಂತ್, ಭಾಗ್ಯಲಕ್ಷ್ಮಿ ,ನಂದೀಶ್ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರುಗಳು ಹಾಜರಿದ್ದು ಇದಕ್ಕೆ ಪೂರಕವಾಗಿ ಇವರುಗಳು ಸಹಮತ ವ್ಯಕ್ತಪಡಿಸುತ್ತಿರುತ್ತಾರೆ.
ವರದಿ ; ಸದಾನಂದ ಕನ್ನೇಗಾಲ, ಗುಂಡ್ಲಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.