ಕನ್ನಡ ಉಳಿಸಿ ಎನ್ನುವ ಕೂಗು ನಗರದ ಎಲ್ಲಡೆ ಕೇಳಿ ಬರುತ್ತಿದ್ದರೆ ಅದನ್ನು ಅನುಷ್ಠಾನ ಮಾಡುವ ಕಾರ್ಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಂದ ನಡೆಯುತ್ತಿದೆ. ಸರ್ಕಾರಿ ಶಾಲೆಗಳು ಶಿಕ್ಷಣ ಜೊತೆ ಉತ್ತಮ ಸಂಸ್ಕಾರ ನೀಡುತ್ತಿದೆ ಎಂದು ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಶತಮಾನೊತ್ಸವ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
ಹೊನ್ನಾವರ ತಾಲೂಕಿನ ಜಲವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೊತ್ಸವ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಬಳಿಕ ಮಾತನಾಡಿ ಶಿಕ್ಷಣ ಒಂದರಿAದಲೇ ಪರಿಪೂರ್ಣತೆ ಸಾಧ್ಯವಿಲ್ಲ. ಶಿಕ್ಷಣದ ಜೊತೆ ಕಲೆ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯ ಶಿಕ್ಷಕರಿಂದ ನಡೆಯಬೇಕಿದೆ. ಮಕ್ಕಳಲ್ಲಿ ಸಂಸ್ಕಾರ ಮೂಡಲು ಶಿಕ್ಷಕರ ಜೊತೆ ಪಾಲಕರ ಪಾತ್ರವು ಕೂಡಿದೆ. ಆದರೆ ಇಂದು ಖಾಸಗಿ ಶಾಲೆಯ ವ್ಯವಸ್ಥೆಗೆ ಮರಳಾಗಿ ಸರ್ಕಾರಿ ಶಾಲೆಯ ಬಗ್ಗೆ ಕೀಳರಿಮೆ ಮೂಡಿಸುವ ಕಾರ್ಯ ನಡೆಯುತ್ತಿದೆ. ಸಾಧನೆ ಮಾಡಿ ಉನ್ನತ ಹುದ್ದೆಯಲ್ಲಿರುವ ಹೆಚ್ಚಿನವರು ಸರ್ಕಾರಿ ಶಾಲೆಯಲ್ಲಿ ಅಧ್ಯಯನ ನಡೆಸಿ ಸಾಧನೆ ಮಾಡಿದವರೆ ಆಗಿದ್ದಾರೆ. ಸರ್ಕಾರಗಳು ಶಿಕ್ಷಣಕ್ಕಾಗಿ ಹಲವು ಸೌಲಭ್ಯವನ್ನು ನೀಡುತ್ತಿದೆ. ಅದರ ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡುವ ಮೂಲಕ ಭವಿಷ್ಯದ ಉತ್ತಮ ಪ್ರಜೆಯಾಗಬೇಕಿದೆ. ಒಂದು ಗ್ರಾಮ ಮಾದರಿಯಾಗಲು ಅಲ್ಲಿಯ ಶಾಲೆ ಹಾಗೂ ದೇವಾಲಯ ಉತ್ತಮವಾಗಿದ್ದರೆ ಮಾತ್ರ ಸಾಧ್ಯ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಎಸ್.ಡಿ.ಎಂ. ಸಂಸ್ಥೆಯ ಉಪನ್ಯಾಸಕರಾದ ಡಾ. ಎಂ.ಆರ್.ನಾಯ್ಕ ಮಾತನಾಡಿ ಇಂದು ಸಂಸ್ಕಾರಗಳು ಮಾಯವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ನಿಜವಾದ ದೇವಾಲಯವಿದ್ದಂತೆ ಇಲ್ಲಿ ಶಿಕ್ಷಕರು ಪೂಜಾರಿ ಇದ್ದ ಹಾಗೇ, ಆಗಮಿಸುವ ಭಕ್ತರೆ ವಿದ್ಯಾರ್ಥಿಗಳು. ಆದರೆ ಇಂದು ದೇಶದೊಳಗೆ ಹಲವು ಅಹಿತಕರ ಘಟನೆಗಳಾದ ಅತ್ಯಾಚಾರ, ದೇಶದ್ರೋಹಿ ಘಟನೆಗೆ ಸಂಭವಿಸುವುದು ಗ್ರಾಮೀಣ ಭಾಗದಲ್ಲಿ ಕಡಿಮೆ ಈ ಸಂಖ್ಯೆ ಪಟ್ಟಣ ಭಾಗದಲ್ಲಿ ಹೆಚ್ಚಾಗಿದೆ ಎಂದರೆ ಗ್ರಾಮೀಣ ಶಿಕ್ಷಣ ಪದ್ದತಿ ಸರಿಯಾಗಿದೆ ಎಂದರ್ಥ. ಮನುಷ್ಯ ಬದುಕಲು ಬೇಕಾಗಿರುವುದು ಅಷ್ಟಸೌಲಭ್ಯಗಳಲ್ಲ ಬದಲಿಗೆ ಮಾನವೀಯ ನೈತಿಕ ಶಿಕ್ಷಣವಾಗಿದೆ. ನಮ್ಮ ದೇಶದಲ್ಲಿ ೫೦ ಸಾವಿರಕ್ಕೂ ಅಧಿಕ ಅನಾಥಶ್ರಮಗಳಿವೆ ಇದು ಕೂಡಾ ಗ್ರಾಮಿಣ ಭಾಗದಲ್ಲಿ ಕಾಣುವುದಿಲ್ಲ. ಆದರೆ ಪಟ್ಟಣದ ಶಿಕ್ಷಣ ವ್ಯವಸ್ಥೆಗೆ ಮಾರು ಹೋಗದೇ ಗ್ರಾಮೀಣ ಭಾಗದ ನೈತಿಕತೆಯನ್ನು ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿದೆ ಎಂದರು.
ವೇದಿಕೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಶಿಕ್ಷಚಕರನ್ನು, ಸಾಧನೆ ಮಡಿದ ಸಾಧಕರನ್ನು, ಸ್ಥಳದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. “ಜ್ಞಾನ ಸಿಂಚನ’ ಹಸ್ತಪತ್ರಿಕೆಯನ್ನು ಮಾಜಿ ಶಾಸಕ ಜೆ.ಡಿ.ನಾಯ್ಕ ಬಿಡುಗೊಳಿಸಲಾಯಿತು. ಅಂಕುಶ ಹಸ್ತಪತ್ರಿಕೆಯನ್ನು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಲ್.ನಾಯ್ಕ ಬಿಡುಗಡೆಗೊಳಿಸಿದರು. ವಿವಿಧ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮ ಪಂಚಾಯತ ಅಧ್ಯಕ್ಷೆ ಲೀಲಾವತಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ವೇದಿಕೆಯಲ್ಲಿ ತಾಲೂಕ ಪಂಚಾಯತ ಸದಸ್ಯ ಲೋಕೇಶ ನಾಯ್ಕ, ಕನ್ನಡಪ್ರಬಾ ಪತ್ರಿಕೆಯ ಹಿರಿಯ ಸಂಪಾದಕ ವಾಸುದೇವ ಶೆಟ್ಟಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಎಸ್.ಎಂ.ಹೆಗಡೆ, ಜಿ.ಎಸ್.ನಾಯ್ಕ, ಎನ್.ಎಸ್.ನಾಯ್ಕ, ಸತೀಶ ನಾಯ್ಕ, ಗ್ರಾಮ ಪಂಚಾಯತ ಸದಸ್ಯರಾದ ರಾಮಚಂದ್ರ ನಾಯ್ಕ, ಅನಂತ ನಾಯ್ಕ, ಸಿಂಧು ನಾಯ್ಕ, ಗ್ರಾಮದ ಪ್ರಮುಖರಾದ ನಾರಾಯಣ ನಾಯ್ಕ, ಪಿ.ಟಿ.ನಾಯ್ಕ, ದೇವರಾಯ ನಾಯ್ಕ, ಕೇಶವ ನಾಯ್ಕ, ಮಹೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮನೊರಂಜನಾ ಕಾರ್ಯಕ್ರಮ ನೇರವೇರಿತು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.