ದಿನಾಂಕ:೦೮:೦೨:೨೦೨೦
ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ಮೂರು ದಿನಗಳ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭವು ಜಾರುಗಿತು..ಈ ಸಮಾರಂಭದಲ್ಲಿ ಸಾನಿಧ್ಯವನ್ನು ಶ್ರೀ ರಾಮಕ್ಷೇತ್ರ ಕನ್ಯಾಡಿಯ ಮಠಾಧೀಶರಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮಿಗಳು ವಹಿಸಿಕೊಂಡರು.. ದೇಶದಲ್ಲಿ ಲೌಕಿಕ ಮತ್ತು ಆಧ್ಯಾತ್ಮಿಕತೆಯ ಉಗಮ,ಭಾರತೀಯ ಸಂಸ್ಕ್ರತಿಯ ಪ್ರಸರಣ ಹೇಗೆ ಆಯಿತು.ಈ ಕೆಳದಿಯ ಮಹಾಮಂತ್ರಿ ತಿಮ್ಮಣ್ಣನಾಯ್ಕರ ಕುಲ ದೇವತೆ ಕೋಟೆ ವೀರಾಂಜನೇಯನ ಪ್ರತಿಷ್ಠಾನೆ ಬಗ್ಗೆ ಮಾತನಾಡಿ ಆಶೀರ್ವಚನ ನೀಡಿದರು.ಈ ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಯುತ ಬೀಮನೇರಿ ಶಿವಪ್ಪನವರು ಕಾರ್ಯಕ್ರಮ ಉದ್ಘಾಟಿಸಿ ದೇಶದ ಎಲ್ಲಾ ಭಾಗದಲ್ಲಿ ಆಂಜನೇಯನ ದೇವಾಲಯಗಳಿವೆ..ಆಂಜನೇಯ ಎಂಬುದು ಸೇವೆಯ,ತ್ಯಾಗದ,ಭಕ್ತಿಯ ಪ್ರತೀಕ ಎಂದು ತಿಳಿಸಿ ಈ ಹೊಗೆವಡ್ಡಿಯ ಸ್ಥಳಕ್ಕೆ ಮೂಲಭೂತ ಸೌಲಭ್ಯಗಳನ್ನು ನಾನು ಮಾನ್ಯ ಶಾಸಕರು ,ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರು ಎಲ್ಲಾ ಸೇರಿ ಕುಡಿಯುವ ನೀರು ,ಶೌಚಾಲಯ ವ್ಯವಸ್ಥೆ ಗೆ ಅನುದಾನ ಕಲ್ಪಸುತ್ತೇವೆ.ಎಂದು ಮಾತನಾಡಿದರು.ಈ ವೇದಿಕೆಯಲ್ಲಿ ಅಕ್ಷರದ ಜೊತೆಗೆ ಹಿರಿಯರಿಗೆ ಉರುಗೋಲು ವಿತರಣೆಯ ಕಾರ್ಯವು ಸಹಿತ ನಡೆದು ಅತೀ ವಿಶೆಷವೆನಿಸಿತು.ಬೆಂಗಳೂರಿನ ನವಚೇತನ ಚಾರಿಟೇಬಲ್ ಟ್ರಸ್ಟ್ ನ ಅದ್ಯಕ್ಷರಾದ ಶ್ರೀ ಮಂಜುನಾಥ ಕೆ ಎಸ್ ಇವರ ಶ್ರಮದ ಫಲದಿಂದ ನೂರು ಮಕ್ಕಳಿಗೆ ೩೫೦ಮೌಲ್ಯದ ಎಸ್ ಎಸ್ ಎಲ್ ಸಿ ಸ್ಕ್ಯಾನರ್ ಡೈಜೆಸ್ಟ್ ಉಚಿತವಾಗಿ ಸನ್ ಸ್ಟಾರ್ ಮಾಲೀಕರಾದ ಶೇಖರ್ ರೆಡ್ಡಿಯವರು ಬೆಂಗಳೂರು ಇವರು ಕಟ್ಟಿನಕಾರು ,ಬಿಳಿಗಾರು ಹೈಸ್ಕೂಲ್ ಮಕ್ಕಳಿಗೆ ವಿತರಿಸಿದರು.ಜಿ ಟಿ ಸತ್ಯ ನಾರಾಯಣ ಅದ್ಯಕ್ಷರು ತುಮರಿ ಗ್ರಾಮ ಪಂಚಾಯತಿ ಅದ್ಯಕ್ಷರು ಮಾತನಾಡಿ ಜಾತ್ರಾ ಮಹೋತ್ಸವ ಸಲ್ಲಿ ಅಕ್ಷರದ ಬೀಜ ಬಿತ್ತಿ ನಮ್ಮ ನೆಲದ ಶೈಕ್ಷಣಿಕ ಬೆಳೆಯನ್ನು ಬೆಳೆಯುವುದು.ಇದೆ ಮೊದಲು ನಾಡಿಗೆ ಬೆಳಕು ನೀಡಿದವರ ಮಕ್ಕಳಿಗೆ ನೀಡುತ್ತಿರುವುದು ಅತ್ಯಂತ ಹೆಮ್ಮೆ ಎನಿದಿದೆ.ಈ ಹೊಗೆವಡ್ಡಿಯ ಕ್ಷೇತ್ರ ಧಾರ್ಮಿಕ ಕ್ಷೇತ್ರವಲ್ಲದೇ ಪ್ರವಾಸಿತಾಣವಾಗಿ ಬೆಳೆಯಲಿ ಎಂದು ನುಡಿದರು. ತಾಲ್ಲೂಕು ಪಂಚಾಯತ ಸದಸ್ಯರಾದ ಶ್ರೀ ಮತಿ ಪ್ರಭಾವತಿ ಚಂದ್ರಕುಮಾರ್,ಶ್ರೀ ಮತಿ ಸವಿತ ದೇವರಾಜ್,ಹಾಜರಿದ್ದರು.ಶ್ರೀ ಮತಿ ಲೋಲಾಕ್ಷಿ,ಶ್ರೀ ಶ್ರೀ ಧರ್,ಸೋಮಶೇಖರ್, ವಕೀಲರಾದ ತ್ಯಾಗ ಮೂರ್ತಿ, ಸೋಮರಾಜ್,ಮತ್ತು ಉಗ್ರಾಣಿಮನೆತನದವರು ಉಪಸ್ಥಿತರಿದ್ದರು. ಈ ಕರೂರು ಬಾರಂಗಿ ಹೋಬಳಿಯಲ್ಲಿ ಸಾಧನೆ ಮಾಡಿದ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು. ರಾಜ್ಯ ಕಲಾರತ್ನ ಪ್ರಶಸ್ತಿ ಪಡೆದ ಶ್ರೀ ಚಂದ್ರಪ್ಪ ಅಳೂರು ಶಿಕ್ಷಕರನ್ನು ಗೌರವಿಸಲಾಯಿತು.ಅದ್ಯಕ್ಷತೆ ವಹಿಸಿದ ಪೂಜ್ಯ ಶ್ರೀ ಅನಂತನಾಯ್ಕ ಉಗ್ರಾಣಿ ಮನೆ ಈ ಮೂರು ದಿನದ ಕಾರ್ಯಕ್ರಮಕ್ಕೆ ದುಡಿದ ಎಲ್ಲಾ ವೀರಾಂಜನೇಯ ಸ್ವಾಮಿಯ ಭಕ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಶ್ರೀ ಜಯಪ್ಪ ಶಿಕ್ಷಕರು ನಿರೂಪಿಸಿ,ಶ್ರೀ ನಾರಾಯಣಪ್ಪ ಸ್ವಾಗತಿಸಿ ಆರೋಡಿ ವಂದಿಸಿದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.