
ಹೊನ್ನಾವರ ; ಸತ್ಯಾಜಾವಗಲ್ ಪ್ರತಿನಿತ್ಯ ಯೋಗ ಮಾಡುವುದರಿಂದ ಮಾನಸಿಕ ಆರೋಗ್ಯ ಹಾಗೂ ಉತ್ತಮ ಚಿಂತನೆ,ದೃಢ ನಿರ್ಧಾರ ಮತ್ತು ಸಾಮಾಜಿಕ ಆರೋಗ್ಯ ಕಾಪಾಡಲು ಸಾಧ್ಯ ಎಂದು ಸಮಾಜಸೇವಕ ಹಾಗೂ ರೋಟರಿಯನ್ ಸತ್ಯಜಾವಗಲ್ ನುಡಿದರು.

ಅವರು ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಯೋಗಗುರು ಭುವನ್ ಸುಂದರ್ ರವರು ಯೋಗದಲ್ಲಿನ ಪ್ರಮುಖ 5 ವಲಯಗಳ ಕುರಿತು ವಿವರಿಸಿ ಯೋಗದಿಂದ ಸಿಗುವ ಲಾಭ ಹಾಗೂ ಯೋಗದಿಂದ ಭಾರತಕ್ಕೆ ವಿಶ್ವಮಾನ್ಯತೆ ಸಿಕ್ಕಿರುವ ಕುರಿತು ಪ್ರಸ್ತಾಪಿಸಿದರು. ಹಾಗೂ ನೌಕರರಿಗೆ ಯೋಗದ ಪ್ರಮುಖ ಆಸನಗಳನ್ನು ಪರಿಚಯಿಸಿ ಅದರ ಪ್ರಯೋಜನದ ಕುರಿತು ವಿವರಿಸಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ಸುರೇಶನಾಯ್ಕ ಯೋಗದಿನದ ಮಹತ್ವ ಹಾಗೂ ಪ್ರತಿದಿನದ ಒಂದು ಗಂಟೆ ವೈಯಕ್ತಿಕವಾಗಿ ಸಾಮಾಜಿಕ ಸೇವೆಯೊಂದಿಗೆ ಯೋಗದಂತಹ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ಸಮಾಜಸೇವೆಯಲ್ಲಿಮುಂದಾಗುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು. ತಾಲೂಕು ಆರೋಗ್ಯಅಧಿಕಾರಿ ರಾಜೇಶಕಿಣಿ ಅವರು ಯೋಗದ ಮಹತ್ವ ಕುರಿತು ತಿಳಿಸಿದರು.
ತಾಲೂಕು ಪಂಚಾಯತ ವ್ಯವಸ್ಥಾಪಕ ರಾಮ ಭಟ್ಟ ಸ್ವಾಗತಿಸಿದರು. ಹನುಮಂತಗೌಡ ವಂದಿಸಿದರು. ತಾಲೂಕಪಂಚಾಯತನ ಎಲ್ಲಾ ಸಿಬ್ಬಂದಿಗಳು ಈ ಆಚರಣೆಯಲ್ಲಿ ಭಾಗವಹಿಸಿ ಯೋಗದ ಮಹತ್ವಪಡೆದರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ