March 16, 2025

Bhavana Tv

Its Your Channel

ಅಂಬಿಗ ಸಮಾಜದ ಮುಖಂಡರಿAದ ಸ್ಪಷ್ಟನೆ

ಹೊನ್ನಾವರ; ತಾಲೂಕಿನ ಕರಿಕುರ್ವಾ ಗ್ರಾಮದ ಅಂಬಿಗ ಸಮಾಜದವರಿಂದ ಬಹಿಷ್ಕಾರದಂತಹ ಯಾವುದೇ ಘಟನೆಯು ಇಲ್ಲ ಎಂದು ಅಂಬಿಗ ಸಮಾಜದ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಹೊನ್ನಾವರ ಪಟ್ಟಣದಲ್ಲಿ ಮಾಹಿತಿ ನೀಡಿದ ಸಮಾಜದ ಮುಖಂಡರು ನಾವು ಇತರೆ ಸಮಾಜದವರಂತೆ ಎಲ್ಲರೊಂದಿಗೆ ಪ್ರೀತಿಯಿಂದ ಧಾರ್ಮಿಕ ಆಚರಣೆಯಂತಹ ಹಲವು ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಲಕ್ಷ್ಮೀ ಬೋಳ ಅಂಬಿಗ ಈ ಕುಟುಂಬವನ್ನು ಸಮಾಜದಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿಗೆ ದೂರು ನೀಡಲು ಹೋಗಿರುವುದು ಮಾಧ್ಯಮದಲ್ಲಿ ವರದಿಯಾಗಿದೆ. ಈ ಘಟನೆ ಸತ್ಯಕ್ಕೆ ದೂರವಾಗಿದ್ದು, ನಮ್ಮಲ್ಲಿ ಅಂತಹ ಯಾವುದೇ ಘಟನೆ ನಡೆದಿರುದಿರುದಿಲ್ಲ. ಕೆಲವರು ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಜುಲೈ ೧ ರ ೨೦೨೨ರಂದು ಇದೇ ರೀತಿ ಪೋಲೀಸ್ ಠಾಣಿಯಲ್ಲಿ ದೂರು ದಾಖಲಾಗಿತ್ತು. ನಾವೆಲ್ಲರೂ ಠಾಣಿಯಲ್ಲಿ ಹೇಳಿಕೆ ನೀಡಿದ್ದರೂ ಇಂತಹ ಆರೋಪ ಮುಂದುವರೆಸಿದ್ದಾರೆ.
ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಪರಿಶೀಲನೆ ನಡೆಸಬಹುದು. ಇಂತಹ ಯಾವುದೇ ಘಟನೆಯು ನಡೆಯುತ್ತಿಲ್ಲ ಎಂದು ಸಮಾಜದ ಮುಖಂಡರು ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಧರ್ಮ ರಾಮ ಅಂಬಿಗ, ಕೇಶವ ಅಂಬಿಗ, ದಿನೇಶ ಅಂಬಿಗ, ಧರ್ಮ ಎನ್. ಅಂಬಿಗ, ಲೊಕೇಶ ಅಂಬಿಗ, ರವಿ ಅಂಬಿಗ, ಯಶವಂತ ಅಂಬಿಗ, ಮೋಹನ ಅಂಬಿಗ, ಬಾಬು ಅಂಬಿಗ, ರಾಮ ಅಂಬಿಗ, ಗಣಪತಿ ಅಂಬಿಗ, ವಾಮನ ಅಂಬಿಗ ಉಪಸ್ಥಿತರಿದ್ದರು.

error: