ಹೊನ್ನಾವರ :-ಹೊನ್ನಾವರ ತಾಲೂಕು ಕದಂಬ ಸೈನ್ಯ ಸಂಘಟನೆ ಸರಳಗಿ ಘಟಕ ಅಧ್ಯಕ್ಷರು, ಸರಳಗಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ತುಂಬಾ ಕ್ರಿಯಾಶೀಲರು ಆಗಿದ್ದ ಗಣಪತಿ ನಾರಾಯಣ ನಾಯ್ಕ್ ಸೆಪ್ಟೆಂಬರ್ 6ರ ಬೆಳಗಿನ ಜಾವ ಹೃದಯಘಾತದಿಂದ ನಿಧನರಾದರು, ಅವರಿಗೆ 52ವರ್ಷ ವಯಸ್ಸಾಗಿತ್ತು. ಸರಳಗಿ ಗ್ರಾಮದಲ್ಲಿ ಕನ್ನಡ ಪರ ಸಂಘಟನೆ ಕದಂಬ ಸೈನ್ಯ ಶಾಖೆ ತೆರೆದು ಅತ್ಯಂತ ಮುತುವರ್ಜಿಯಿಂದ ಕಾರ್ಯ ಮಾಡುತ್ತಿದ್ದರು. ಗ್ರಾಮದ ಅನೇಕ ಸಮಸ್ಯೆಗಳನ್ನು ಆ ಸಂಘಟನೆ ಮೂಲಕ ಬಗೆಹರಿಸುತ್ತಿದ್ದರು. ಅನೇಕ ರಾಜಕೀಯ ಪ್ರಮುಖರ ನಂಟು ಹೊಂದಿದ ಅವರು ಅಭಿವೃದ್ಧಿ ಕಾರ್ಯ ಮಾಡುವಲ್ಲಿ ತುಂಬಾ ಸಹಕರಿಸುತ್ತಿದ್ದರು. ಅವರ ಅಕಾಲಿಕ ಮರಣ ಆ ಭಾಗದ ಎಲ್ಲರಿಗೂ ಬೇಸರ ಉಂಟು ಮಾಡಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಮೂಡಿದೆ. ಮೃತರು ಪತ್ನಿ, ಶ್ರೀಮತಿ’ಮಹಾಲಕ್ಷ್ಮಿ’ಒರ್ವಪುತ್ರ ಇರ್ವರು ಪುತ್ರಿಯರು, ಬಂದು ಬಳಗ ಹಾಗೂ ಅಪಾರ ಗೆಳೆಯರ ಬಳಗ ಅಗಲಿದ್ದಾರೆ. ಸಂತಾಪ ; ಕದಂಬ ಸೈನ್ಯದ ಪ್ರಮುಖರು ಗಣಪತಿ ನಾರಾಯಣ ನಾಯ್ಕ ನಿಧನಕ್ಕೆ ಕದಂಬ ಸೈನ್ಯ ಸಂಘಟನೆ ರಾಜ್ಜ ಅಧ್ಯಕ್ಷರು ಬೇಕ್ರಿ ರಮೇಶ್, ಈ ಹಿಂದಿನ ರಾಜ್ಯ ಸಂಚಾಲಕರು ಉದಯಕುಮಾರ್ ಕಾನಳ್ಳಿ ಬನವಾಸಿ, ಹಾಲಿ ರಾಜ್ಯ ಸಂಚಾಲಕರು ಶಿವಕುಮಾರ್, ರಾಜ್ಯ ಸಮಿತಿ ಸದಸ್ಯರು ಮೋಹನದಾಸ ನಾಯ್ಕ್ ಶಿರಸಿ, ಉತ್ತರ ಕನ್ನಡ ಜಿಲ್ಲಾ ಸಂಚಾಲಕರು ಪುರಂದರ ನಾಯ್ಕ್,ಸರಳಗಿ ;ಬನವಾಸಿ ಘಟಕ ಅಧ್ಯಕ್ಷ ಗುತ್ಯಪ್ಪ ಮಾದರ್ ಹೊನ್ನಾವರ ಘಟಕದ ಉಪಾಧ್ಯಕ್ಷರು ನಾರಾಯಣ ಎಮ್ ಉಪ್ಪಾ ಮತ್ತು ಅತಿಸ ನಿರ್ಮಲಕುಮಾರ ಕಾರ್ಯದರ್ಶಿಗಳಾದ ಲೊಕೇಶ ಎಸ್ ಉಪ್ಪಾರ, ಹೊನ್ನಪ್ಪಾ ನಾಯ್ಕ ‘ಸಂಚಾಲಕರು ಮಾರುತಿ ಜಿ ಉಪ್ಪಾರ ಗಣಪತಿ ಐ ಉಪ್ಪಾರ ಹಾಗೂ ಸರ್ವ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ