December 22, 2024

Bhavana Tv

Its Your Channel

ಶಾಲಾ ಮಕ್ಕಳುಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ …….

ಹೊನ್ನಾವರ ; ಪ್ರಯತ್ನ ಫೌಂಡೇಶನ್ ಬೆಂಗಳೂರು ಇವರು ಹಲವು ವರ್ಷಗಳಿಂದ ಶಾಲಾ ಮಕ್ಕಳಿಗೆ ಅವಶ್ಯಕತೆ ಇರುವ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಾ ಬರುತ್ತಿದ್ದು ಸೆಪ್ಟೆಂಬರ್ 2 ಶನಿವಾರದಂದು ಹೊನ್ನಾವರ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾವುರಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಮತ್ತು ಶಾಲೆಗೆ ಅವಶ್ಯತೆ ಇರುವ ವಸ್ತುಗಳನ್ನು ಪ್ರಯತ್ನ ಫೌಂಡೇಶನ್ ಬೆಂಗಳೂರು ಇದರ ಅಧ್ಯಕ್ಷರು ಮತ್ತು ಸದಸ್ಯರ ಅನುಪಸ್ಥಿತಿಯಲ್ಲಿ ಅದರ ಕಾರ್ಯಕರ್ತರಾದಂತ ಪುರಂದರ ಜಿ ನಾಯ್ಕ್ ಮತ್ತು ಜನಾರ್ದನ್ ನಾಯ್ಕ್ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು ಶಾಲೆಯ ಅಧ್ಯಾಪಕರು ಹಾಗೂ ಪಾಲಕರು ಉಪಸ್ಥಿತರಿದ್ದು ಪ್ರಯತ್ನ ಫೌಂಡೇಶನ್ ಬೆಂಗಳೂರು ಇವರು ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡಲಿ ಎಂದು ಹಾರೈಸಿದರು…

error: