ಗೇರಸೊಪ್ಪಾ : ವಿದ್ಯಾರ್ಥಿಗಳ ಕಲಿಕೆ ಬರಿ ಪುಸ್ತಕಕ್ಕೆ ಸೀಮಿತವಾಗಿರಬಾರದು, ಜೀವನದ ಕಲೆಗೆ ಅವಶ್ಯವಿರುವುದೆಲ್ಲವನ್ನು ಕಲಿಯಬೇಕು. ಎಂದು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಎಂಡ್ ಪಿ. ಯು. ಕಾಲೇಜಿನ ಕರಾಟೆ ಹಾಗೂ ಚೆಸ್ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು. ಕರಾಟೆ ಯಾವುದೇ ಆಯುಧಗಳಿಲ್ಲದೆ ಆತ್ಮ ರಕ್ಷಣೆಮಾಡಿಕೊಳ್ಳುವ ಕಲೆಯಾಗಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಇದರ ಅವಶ್ಯಕತೆ ಇದ್ದು ಹೆಣ್ಣು ಮಕ್ಕಳಿಗೆ ತುಂಬಾ ಅನುಕೂಲಕರ ಅವಶ್ಯ ಕಲೆಯಾಗಿದೆ ಎಂದರು. ಹಾಗೇ ಚೆಸ್ ಸಹ ವಿದ್ಯಾರ್ಥಿಗಳಿಗೆ ಎಕಾಗ್ರತೆಯೊಂದಿಗೆ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಮ್ಮ ಮಾತುಗಳಲ್ಲಿ ವಿವರಿಸಿದರು.
ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಎಂಡ್ ಪಿ. ಯು. ಕಾಲೇಜ್ ವಿದ್ಯಾರ್ಥಿಗಳಿಗಾಗಿ ತಬಲ, ಸಂಗೀತ, ಭರತನಾಟ್ಯ, ಯಕ್ಷಗಾನ ಕಲೆಗಳ ತರಬೇತಿಯನ್ನು ನೀಡುತ್ತಿದ್ದು ವಿದ್ಯಾರ್ಥಿಗಳ ಆಸಕ್ತಿಯನ್ನು ಮನಗಂಡು ಕರಾಟೆ ಹಾಗೂ ಚೆಸ್ ತರಗತಿಗಳನ್ನು ಆರಂಭಿಸಲು ನಿರ್ಣಯಿಸಿ ದಿನಾಂಕ 09-09-2023 ರಂದು ಕರಾಟೆ ಹಾಗೂ ಚೆಸ್ ತರಗತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ದಿವ್ಯ ಸಾನಿಧ್ಯದೊಂದಿಗೆ, ಕಾರ್ಯದರ್ಶಿಗಳಾದ ಶ್ರೀಮತಿ ಅರ್ಪಿತಾ ಮಾರುತಿ ಗುರೂಜಿ, ರಾಷ್ಟೀಯ ತರಬೇತುದಾರರಾದ ಶ್ರೀ ಪ್ರಭಾಕರ್ , ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಮಂಜುನಾಥ ಎಮ್.ಎನ್., ಪ್ರಾಂಶುಪಾಲರಾದ ಶ್ರೀ ಎಸ್. ಜಾನ್ ಬೊಸ್ಕೊ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಷ್ಟೀಯ ತರಬೇತುದಾರರಾದ ಶ್ರೀ ಪ್ರಭಾಕರ್ ಇವರು ತಮ್ಮ ತಂಡದೊAದಿಗೆ ತರಬೇತಿ ನೀಡಲು ಆಗಮಿಸಿದ್ದು ಕರಾಟೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸುವುದರ ಜೊತೆಗೆ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಸಭೆಯ ಕೊನೆಯಲ್ಲಿ ತರಬೇತಿ ತಂಡದವರು ವೇದಿಕೆಯ ಮೇಲೆ ಗೌರವವನ್ನು ಸ್ವೀಕರಿಸಿ ತರಗತಿಯನ್ನು ಆರಂಭಿಸಿದರು.
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ