
ಹೊನ್ನಾವರ ; ಖ್ಯಾತ ವೈದ್ಯರು ,ಚಿಂತಕರು, ಸಾಹಿತಿಗಳು ,ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ ಮೂಲದ, ಪ್ರಸ್ತುತ ಭದ್ರಾವತಿಯಲ್ಲಿ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ, ಖ್ಯಾತ ವೈದ್ಯರಾದ ಡಾಕ್ಟರ್ ಕೃಷ್ಣ ಎಸ್ ಭಟ್ ರವರು ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ ಆರೋಗ್ಯವಂತ ಮಿದುಳನ್ನು ಹೊಂದಿದ ಪ್ರತಿಯೊಬ್ಬ ಮನುಷ್ಯನು ಶ್ರೀಮಂತ .ದಾನಕ್ಕೆ ಹಣ ,ಜ್ಞಾನ ಎಂಬ ಎರಡು ಮಾರ್ಗಗಳಿವೆ, ಸೇವೆ ಸಮಾಜದ ಋಣ ತೀರಿಸುವ ಒಂದು ಮಾರ್ಗ ಎಂದರು .
ವಿದ್ಯಾರ್ಥಿಗಳ ಜೀವನದ ಗುರಿ ನಿಖರವಾಗಿ ವಾಸ್ತವಿಕತೆಗೆ ಹತ್ತಿರವಾಗಿರಬೇಕು .ಶ್ರಮದ ದಾರಿಯಲ್ಲಿ ಬರುವ ತೊಂದರೆಗಳಿಗೆ ನಾವೇ ಪರಿಹಾರವಾಗಬೇಕು. ಜೀವನದ ದೌರ್ಬಲ್ಯ ಅರಿತರೆ ಸಾಮರ್ಥ್ಯಗಳಿಸಬಹುದು. ಮನುಷ್ಯನಲ್ಲಿರುವ ಜಾಗೃತ ಮನಸ್ಸು ಹಾಗೂ ಸುಪ್ತ ಮನಸ್ಸಿನ ನಡುವಿನ ಹೊಂದಾಣಿಕೆ ಕಲಿಕೆಗೆ ಪೂರಕ .ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು ಶ್ರಮದಭಾವ ,ಗಟ್ಟಿತನ, ನಂಬಿಕೆ ,ಆತ್ಮಸ್ಥೈರ್ಯ ,ವೇಳೆಯ ಹೊಂದಾಣಿಕೆ ,ಕ್ರಮಬದ್ಧ ಶಿಸ್ತಿನ ಜೀವನ ,ಇದ್ದರೆ ಯಶಸ್ಸು ಸಾಧ್ಯ ಎಂದು ಹೇಳಿದರು .
ನಾಗರಿಕ ಪತ್ರಿಕೆಯ ಸಂಪಾದಕರಾದ ಶ್ರೀ ಕೃಷ್ಣಮೂರ್ತಿ ಹೆಬ್ಬಾರವರು ಶ್ರೀ ಕೆ. ಎಸ್ ಭಟ್ಟ ರವರ ಶಿಸ್ತು, ಉತ್ಸಾಹ, ಪ್ರೇರಣಾದಾಯಕ ನುಡಿಗಳು ವಿದ್ಯಾರ್ಥಿಗಳಿಗೆ ಬದುಕಿಗೆ ಮಾರ್ಗದರ್ಶಕ ಎಂದರು ?ಮುಖ್ಯಾಧ್ಯಾಪಕರಾದ ಶ್ರೀ ಎಲ್ ಎಂ ಹೆಗಡೆಯವರು ವಿದ್ಯಾರ್ಥಿಗಳು ಕೇಳಿದ್ದನ್ನಾ ಅರಿತು ಮನನ ಮಾಡಿಕೊಂಡು ಅನುಷ್ಠಾನಗೊಳಿಸಿದಾಗ ಯಶಸ್ಸು ದೊರೆಯುತ್ತದೆ ಎಂದು ಮಾತು ಹೇಳಿದರು.
ಶ್ರೀ ಕೆ ವಿಭಟ್ಟ ನಿವೃತ್ತ ಉಪನ್ಯಾಸಕರು ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು ಕವಲಕ್ಕಿ ಉಪಸ್ಥಿತರಿದ್ದರು .ಶ್ರೀಮತಿ ಸೀಮಾ ಭಟ್ ಸ್ವಾಗತಿಸಿದರು .ಶ್ರೀ ಸುಬ್ರಹ್ಮಣ್ಯ ಭಟ್ಟ ವಂದಿಸಿದರು.ಶ್ರೀಮತಿ ಮುಕ್ತಾ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು .ಶಾಲೆಗೆ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ