ಶಿರಸಿ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಮುಂಡಗೋಡು ತಾಲೂಕಿನ ಮಳಗಿ, ಕೋಡಂಬಿ, ಪಾಳಾ, ಹನುಮಾಪುರ, ಚಿಗಳ್ಳಿ ಮುಂತಾದ ಕಡೆ ಪ್ರಚಾರಕಾರ್ಯ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಕ್ಕೆ ಮೋದಿಜೀಯವರು ಅನಿವಾರ್ಯವಾಗಿದ್ದಾರೆ. ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವುದು ನಮ್ಮ ಕರ್ತವ್ಯ. ಮೋದಿಯವರು ಮಾಡಿದ ಉತ್ತಮ ಕೆಲಗಳಿಗಾಗಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕಾಗಿದ್ದು, ಕಮಲದ ಹೂವಿಗೆ ಮತ ನೀಡುವ ಮೂಲಕ ಅವರಿಗೆ ಕೃತಜ್ಞತೆಯನ್ನೂ ಸಲ್ಲಿಸಬೇಕಾಗಿದೆ ಎಂದರು.
ಕಳೆದ 10 ವರ್ಷದಲ್ಲಿ ಗಡಿಗಳ ರಕ್ಷಣೆ ಇದೆ. ಸೈನಿಕರಿಗೆ ನೈತಿಕ ಶಕ್ತಿ ಬಂದಿದೆ. ಬಾಂಬ್ ಸ್ಪೋಟಗಳು ಆಗುತ್ತಿಲ್ಲ. ಸೈನಿಕರೊಟ್ಟಿಗೆ ಸೇರಿ ದೀಪಾವಳಿ ಆಚರಿಸಿ ಅವರಿಗೆ ಮಾನಸಿಕವಾಗಿಯೂ ಶಕ್ತಿ ತುಂಬುವ ಕೆಲಸ ನಡೆದಿದೆ. ಹಿಂದೆ ಜಮ್ಮು ಕಾಶ್ಮೀರದಲ್ಲಿ ವ್ಯಾಪಾರ, ವ್ಯವಹಾರ ಮಾಡುವಂತೆ ಇರಲಿಲ್ಲ. ಮೋದಿಯವರು ಆರ್ಟಿಕಲ್ 370 ರದ್ದು ಮಾಡಿ, ಎಲ್ಲಾ ರಾಜ್ಯಗಳಂತೆ ಜಮ್ಮು ಕಾಶ್ಮೀರವನ್ನೂ ಮಾಡಲಾಗಿದೆ. ಅದು ಭಾರತದ ಅವಿಭಾಜ್ಯ ಅಂಗ ಎಂಬAತೆ ಮಾಡಲಾಗಿದೆ. ಇದೆಲ್ಲದಕ್ಕೂ ಮೋದಿಯವರ ದೃಢ ನಿರ್ಧಾರ ಕಾರಣ ವಾಗಿದ್ದು, ಅವರಿದ್ದಲ್ಲಿ ದೇಶದ ರಕ್ಷಣೆ, ಬಡವರ ಅಭಿವೃದ್ಧಿ ಎಲ್ಲವೂ ಸಾಧ್ಯ ಎಂದರು.
ಈ ವೇಳೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾ ಉಪಾಧ್ಯಕ್ಷರಾದ ಎಲ್. ಟಿ ಪಾಟಿಲ, ಚಂದ್ರು ಎಸಳೆ, ಅಶೋಕ ಚಲುವಾದಿ, ಮಂಡಳ ಅಧ್ಯಕ್ಷ ಮಂಜುನಾಥ ಪಾಟೀಲ, ಪ್ರಮುಖರಾದ ಮಲ್ಲಿಕಾರ್ಜುನ ಬಾಳೇಕಾಯಿ, ರಾಘು ಉಳ್ಳಟ್ಟಿ, ಸಿ ಪಿ ಪಾಟೀಲ್, ವಿಠ್ಠಲ್ ಬಾಳಂಬೀಡ್, ಭರತ್ ಹಂದಲಗಿ,ಲಿಸ್ಸಾ ಥಾಮಸ್, ಸಂತೋಷ, ಗಣಪತಿ ಬಾಳಮ್ಮನವರ, ಮೈತ್ರಿ ಪಕ್ಷ ಜೆ.ಡಿ.ಎಸ್ ನ ತಾಲೂಕಾಧ್ಯಕ್ಷ ಪಿ.ಎನ್.ಅಂತೋಜಿ, ಕ್ಷೇತ್ರ ಅಧ್ಯಕ್ಷ ಎ.ಎಸ್. ಸಂಗೂರಮಠ, ಪ್ರಮುಖರಾದ ಕಡವಯ್ಯ ಹಾಗೂ ಇತರರು ಇದ್ದರು.
More Stories
ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ