ಹೊನ್ನಾವರ: ಫಲಾನುಭವಿಗಳಿಗೆ ಕಿಟ್ ವಿತರಣೆ ನೇರವೇರಿಸಿದ ಹೊನ್ನಾವರ ಪೊಲೀಸ್ ಠಾಣಿಯ ಎ.ಎಸ್.ಐ ಸುಶಾಂತ ಮಾತನಾಡಿ ಈ ಬಾರಿಯು ಹೊನ್ನಾವರ ತಾಲೂಕಿನ ಗುಂಡಬಾಳ, ಭಾಸ್ಕೇರಿ ಹಾಗೂ ಬಡಗಣೆ, ಶರಾವತಿ ನದಿ ತೀರದ ನಿವಾಸಿಗಳ ಮನೆಗಳಿಗೆ ಪ್ರವಾಹ ಸಮಸ್ಯೆ ತಂದೊಡ್ಡಿತ್ತು. ಮಳೆಯ ತಿವ್ರತೆ ಜಾಸ್ತಿ ಆಗಿರುದರಿಂದ ಸೌಲಭ್ಯಗಳ ಹಂಚಿಕೆಯಲ್ಲಿ ಕೊರತೆಯಾಗುತ್ತದೆ. ಅಂತಹ ಸಮಯದಲ್ಲಿ ಬಿ.ಎಸ್.ಎಸ್ ಮೈಕ್ರೊ ಪೈನಾನ್ಸ ನೆರವು ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿ.ಎಸ್.ಆರ್ ಚೀಪ್ ಮ್ಯಾನೇಜರ್ ಸಿದ್ದು ಕೆ ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ದೇಶದ ೧೩ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಸ್ಥೆಯು ೨೦ ಲಕ್ಷ ಬಡವರಿಗೆ ನೆರವಾಗುತ್ತಿದೆ. ಪ್ರಸುತ್ತ ವರ್ಷದಲ್ಲಿ ದೇಶದ ವಿವಿದಡೆ ನೆರೆ ಹಾನಿ ಸಂಭವಿಸಿದ್ದು, ಅಂತಹ ಫಲಾನುಭವಿ ಕುಟುಂಬಕ್ಕೆ ನೆರವಾಗಲು ಕಿಟ್ ವಿತರಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯಚಟುವಟಿಕೆ ವಿವರಿಸಿದರು.
ತಾಲೂಕಿನ ಆಯ್ದ ೨೮೮ ಕುಟುಂಬಗಳಿಗೆ ಕಿಟ್ ಇದೆ ವೇಳೆ ವಿತರಿಸಲಾಯಿತು. ಸಿ.ಎಸ್.ಆರ್ ಸಹಾಯಕ ವ್ಯವಸ್ಥಾಪಕರಾದ ಪ್ರಶಾಂತ ಕುಮಾರ ಮಾತನಾಡಿ ಶಿಕ್ಷಣ, ಆರೋಗ್ಯ, ಹೈನುಗಾರಿಕೆ, ಸ್ವಾವಲಂಭನೆಗೆ ಮಹತ್ವ ನೀಡುತ್ತಾ ಸಂಸ್ಥೆಯು ಸಹಕಾರ ನೀಡುತ್ತಾ ಬಂದಿದೆ. ಈ ಬಾರಿ ನೆರೆ ಪೀಡಿತರಿಗೆ ಕಿಟ್ ಜೊತೆ ೫೦೦ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಯೋಜನೆ ರೂಪಿಸಿದ್ದೇವೆ. ದಾವಣಗೇರಿ, ಗದಗ, ಧಾರವಾಡ ಭಾಗದಲ್ಲಿ ಹೈನುಗಾರಿಕೆ ನೆರವಾಗುತ್ತಿದ್ದೇವೆ ಎಂದರು.
ವಲಯ ವ್ಯವಸ್ಥಾಪಕ ಶಿವಲಿಂಗ ಶೆಟ್ಟಿ, ಶಾಖಾ ವ್ಯವಸ್ಥಾಪಕ ನವೀನ ಶೆಟ್ಟಿ ಹಾಗೂ ಸಿಬ್ಬಂದಿಗಳು, ಫಲಾನುಭವಿಗಳು ಇದ್ದರು.
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ