September 25, 2024

Bhavana Tv

Its Your Channel

ಧರಣಿಯನ್ನು ಕೈ ಬಿಡುವಂತೆ ಪ್ರತಿಭಟಕಾರರ ಮನವಲಿಸಲು ಪ್ರಯತ್ನಿಸಿದ ಸಹಾಯಕ ಆಯುಕ್ತೆ ಡಾ. ನಯನ

ಭಟ್ಕಳ : ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ರಾತ್ರಿ ಸಹಾಯಕ ಆಯುಕ್ತೆ ಡಾ. ನಯನ ಭೇಟಿ ನೀಡಿ ಧರಣಿಯನ್ನು ಕೈ ಬಿಡುವಂತೆ ಪ್ರತಿಭಟಕಾರರ ಮನವಲಿಸಲು ಪ್ರಯತ್ನಿಸಿದರು.

ಭಟ್ಕಳ: ಧರಣಿನಿತರರನ್ನು ಉದ್ದೇಶಸಿ ಮಾತನಾಡಿದ ಅವರು ಈಗಾಗಲೇ ವರ್ಗಾವಣೆ ಪ್ರಕ್ರಿಯೆ ಹಂತದಲ್ಲಿದೆ ನೀವು ಸದ್ಯ ಧರಣಿಯನ್ನು ಇಲ್ಲಿಯೇ ಕೈ ಬಿಡುವಂತೆ ಕೇಳಿಕೊಂಡರು. ಇದಕ್ಕೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಚೆನ್ನಯ್ಯ ವಸ್ತ್ರದ್ ಮಾತನಾಡಿ ವರ್ಗಾವಣೆ ಪ್ರಕ್ರಿಯೆ ಹಂತದಲ್ಲಿದೆ ಎಂದು ತಾವೇನು ಹೇಳುತ್ತಿದ್ದೀರೋ ಅದನ್ನೇ ನಮಗೆ ಲಿಖಿತ ರೂಪದಲ್ಲಿ ನೀಡಿದರೆ ನಾವು ಧರಣಿಯಯನ್ನು ಇಲ್ಲೇ ಕೈಬಿಡುತ್ತೇವೆ ಎಂದರು. ಬಳಿಕ ಇದಕ್ಕೆ ಉತ್ತರಿಸಿದ ಸಹಾಯಕ ಆಯುಕ್ತೆ ಡಾ. ನಯನ ವರ್ಗಾವಣೆ ಪ್ರಕ್ರಿಯೆ ಹಂತ ಸರ್ಕಾರದ ಹಂತದಲ್ಲಿ ನಡೆಯುದರಿಂದ ನಾವು ಲಿಖಿತ ರೂಪದಲ್ಲಿದಲ್ಲಿ ಕೊಡಲು ಸಾಧ್ಯವಾಗುದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷ ಶಂಕರ ನಾಯ್ಕ ಜಿಲ್ಲಾಧಿಕಾರಿಗಳಿಗೆ ನಿಯೋಜನೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ನಮಗೆ ಲಿಖಿತ ರೂಪದಲ್ಲಿ ಯಾವಾಗ ವರ್ಗಾವಣೆ ಮಾಡುತ್ತಿರ, ಯಾರು ಪತ್ರ ಕೊಟ್ಟರು ಪರವಾಗಿಲ್ಲ ಸದ್ಯ ವರ್ಗಾವಣೆ ನಿಯಮ ಪಾಲನೆಯಾಗ ಬೇಕು ಎಂದರು. ನಂತರ ಸಹಾಯಕ ಆಯುಕ್ತೆ ಸರ್ಕಾರ ಹಂತದಲ್ಲಿ ಇರುವುದರಿಂದ ಜುಲೈ ತಿಂಗಳಲ್ಲಿ ಜನರಲ್ ಟ್ರಾನ್ಸ್ಪರ್ ಅವಧಿ ಮುಕ್ತಾಯಗೊಂಡಿದೆ. ಯಾವಾಗ ಬೇಕು ಅವಾಗ ವರ್ಗಾವಣೆ ಮಾಡಲು ಸಾಧ್ಯವಾಗುದಿಲ್ಲ ಎಂದರು. ನಂತರ ಕಾರ್ಯದರ್ಶಿ ನಾಗೇಶ ನಾಯ್ಕ ಮಾತನಾಡಿ ಜೂನ್ ಜುಲೈ ತಿಂಗಳ ತನಕ ಬರುವವರೆಗೂ ಕೂಡ ನಾವು ಧರಿಣಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ ಎಂದ ಅವರು ವರ್ಗಾವಣೆ ನಿಮ್ಮ ಹಂತದಲಿಲ್ಲ ನಾವು ಒಪ್ಪುತ್ತೇವೆ. ಆದರೆ ಜಿಲ್ಲಾಡಳಿತದ ಬೇಜವ್ದರಿ ಇಂದಾಗಿ 10 ರಿಂದ 15 ವರ್ಷ ಕೆಲಸ ಮಾಡುತ್ತಿದ್ದಾರೆ. ಇನ್ನು ನಮಗೆ ಕಾಯಲು ಸಾಧ್ಯವಿಲ್ಲ ಎಂದರು. ಬಳಿಕ ಸಹಾಯಕ ಆಯುಕ್ತೆ ಡಾ. ನಯನ ಮಾತನಾಡಿ ನೀವು ಕೊಟ್ಟಿರುವ ಲಿಸ್ಟ್ ನಲ್ಲಿ 9 ಜನರನ್ನು ವರ್ಗಾವಣೆ ಮಾಡಬೇಕು ಎಂದು ಇದೆ. ಅಷ್ಟು ಜನರನ್ನು ಒಂದೇ ಸಮನೆ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ತುಂಬಾ ಸಮಯ ಹಿಡಿಯುತ್ತದೆ. ನೀವು ನಾಳೆ ಕಚೇರಿ ಸಮಯದಲ್ಲಿ ಬಂದು ಮಾತನಾಡಿ ಎಂದರು.
ನಂತರ ರಾಜ್ಯಾಧ್ಯಕ್ಷ ಚೆನ್ನಯ್ಯ ವಸ್ತ್ರದ್ ಮಾತನಾಡಿ ಮೇಡಂ ನೀವು ಸಮಯ ತೆಗೆದುಕೊಳ್ಳಿ ನಾವು ಒಂದೇ ದಿನದಲ್ಲಿ ವರ್ಗಾವಣೆ ಮಾಡಿ ಎಂದು ಹೇಳುತ್ತಿಲ್ಲ . ಮಾಡಲು ಇಷ್ಟು ದಿನ ಸಮಯ ಬೇಕು ಎಂದು ಹೇಳಿ. ಬೆಳ್ಳಿಗ್ಗೆ ನೀವು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅವರು ಏನು ಹೇಳುತ್ತಾರೋ ಅದನ್ನು ನಮಗೆ ಲಿಖಿತ ರೂಪದಲ್ಲಿ ಕೊಡಿ. ಅವರೇ ಬಂದು ಕೊಡಬೇಕು ಎಂದು ಹೇಳುತ್ತಿಲ್ಲ. ಅವರು ಕೊಟ್ಟಿರುವ ಹೇಳಿಕೆಯನ್ನು ನೀವು ತಂದು ನಮಗೆ ಮುಟ್ಟಿಸಿ ಎಂದರು. ನಂತರ ಸ್ಥಳದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಸಹಾಯಕ ಆಯುಕ್ತರು ಮಾತನಾಡಿದರು. ನಂತರ ಬೆಳ್ಳಿಗ್ಗೆ ವರ್ಗಾವಣೆ ಬಗ್ಗೆ ಚರ್ಚೆ ಮಾಡುತ್ತೇವೆ.ನೀವು ಪ್ರತಿಭಟನೆ ಕೈ ಬಿಡುವಂತೆ ಹೇಳಿದರು. ಇದಕ್ಕೆ ಧರಣಿಕಾರರು ಒಪ್ಪದೆ ನಾವು ಇಂದು ಇಲ್ಲೇ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದರು.

ಇನ್ನೇನು ಶನಿವಾರದಂದು ಯಾವೆಲ್ಲ ಸನ್ನಿವೇಶ ನಡೆಯುತ್ತದೆ ಎಂದು ಕಾದು ನೋಡಬೇಕಿದೆ, ಈ ಧರಣಿ ಸತ್ಯಾಗ್ರಹಕ್ಕೆ ಶುಕ್ರವಾರ ರಾತ್ರಿ ಕನ್ನಡ ಭುವನೇಶ್ವರಿ ಸಂಘ ಅಸರಕೇರಿ ಬೆಂಬಲ ನೀಡಿ ಧರಣಿಗೆ ಸಾತ್ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗರಾಜ್ ನಾಯ್ಕಡ್,ಡಿವೈಎಸ್‌ಪಿ ಮಹೇಶ ಎಂ.ಕೆ., ಉಪಸ್ಥಿತರಿದ್ದರು

error: