April 5, 2025

Bhavana Tv

Its Your Channel

ಗಂಡನ ಕಿರುಕುಳಕ್ಕೆ ಬೇಸತ್ತು ಚೌಥನಿ ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ

ಭಟ್ಕಳ: ತನ್ನ ಗಂಡ ನೀಡುತ್ತಿದ್ದ ದೈಹಿಕ ಹಾಗೂ ಮಾನಸಿಕ ಕಿರುಕುಳ ತಾಳಲಾರದೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿ ಮಹಿಳೆ
ತಾಲೂಕಿನ ಚೌಥನಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರದಂದು ನಡೆದಿದೆ

ಮೃತ ಮಹಿಳೆ ಜುಲೇಖಾ ಮೊಹಮ್ಮದ್ ಶಫಿ ಎಂದು ತಿಳಿದು ಬಂದಿದ್ಫು.ಆರೋಪಿ ಮೊಹಮ್ಮದ್ ಶಫಿ ಶಂಶುದ್ದೀನ್( 56) ವರ್ಷ ಎಂದು ತಿಳಿದು ಬಂದಿದೆ. ಆರೋಪಿ ತನ್ನ ಪತ್ನಿಯಾದ ಮೃತ ಜುಲೇಖಾಳಿಗೆ ಸುಮಾರು ವರ್ಷಗಳಿಂದ ಹೊಡೆದು ಬಡಿದು ಮಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ಕೊಡುತ್ತಿದ್ದು ಪದೇ ಪದೇ ಮೃತಳಿಗೆ ಸಾಯುವಂತೆ ಪ್ರಚೋದನೆ ನೀಡಿರುತ್ತಾನೆ ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಮೃತ ಮಹಿಳೆ ಜೀವನದಲ್ಲಿ ನೊಂದು 3 ದಿನದ ಹಿಂದೆ ಸಹರ ವ್ಯಾಪ್ತಿಯ ಚೌಥನಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂದಿರುತ್ತಾಳೆ. ಶನಿವಾರ ಮಧ್ಯಾಹ್ನ ಚೌಥನಿ ಹೊಳೆಯಲ್ಲಿ ಮಹಿಳೆಯ ಹೊಳೆಯಲ್ಲಿನ ಕಲ್ಲಿಗೆ ಸಿಲುಕಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆ ಬಂದ ನಗರ ಠಾಣಾ ಪೊಲೀಸರು ಪರಿಶೀಲಿನೆ ನಡೆಸಿ ಸರ್ಕಾರಿ ಆಸ್ಪತ್ರೆಗೆ ಮೃತ ದೇಹ ಸಾಗಿಸಲಾಗಿದ್ದು .ಮರಣೋತ್ತರ ಪರೀಕ್ಷೆ ನೆಡೆಸಿ ಕುಟುಂಬ ಹಸ್ತಾಂತರಿಸಲಾಗಿದೆ

ಈ ಕುರಿತು ನಗರ ಠಾಣೆಯಲ್ಲಿ ಮೃತ ಮಹಿಳೆಯ ಮಗ ಅಬ್ದ್ದುಲ್ ಸಲಾಂ ಮಹಮ್ಮದ್ ಶಫಿ ದೂರು ಸಲ್ಲಿಸಿದ್ದು ಪ್ರಕರಣ ದಾಖಲು ಮಾಡಿಕೊಂಡು ಪೋಲಿಸರು ಆರೋಪಿ ಗಂಡನನ್ನು ಬಂಧನ ಮಾಡಲಾಗಿದೆ.

error: