December 22, 2024

Bhavana Tv

Its Your Channel

ಫೆಬ್ರವರಿ ೨೧ ಮಹಾಶಿವರಾತ್ರಿ ಪ್ರಯುಕ್ತ ಭಟ್ಕಳದಿಂದ ಮುರ್ಡೇಶ್ವರದವರೆಗೆ ೧೦ನೇವರ್ಷದ ಪಾದಯಾತ್ರೆ’

ಭಟ್ಕಳ: ಫೆಬ್ರವರಿ ೨೧ರಂದು ಮಹಾಶಿವರಾತ್ರಿಯ ಪ್ರಯುಕ್ತ ರಂಜನ್ ಇಂಡಿಯನ್ ಏಜೆನ್ಸಿ ಹಾಗೂ ಸಾಲಗದ್ದೆ ಸ್ಪೋಟ್ಸ್ ಕ್ಲಬ್ ಇವರ ಸಹಯೋಗದಲ್ಲಿ ೧೦ನೇ ವರ್ಷದ ಪಾದಯಾತ್ರೆಯೂ ಭಟ್ಕಳದಿಂದ ಮುರುಡೇಶ್ವರ ದೇವಸ್ಥಾನದ ತನಕ ಮುಂಜಾನೆ ೪ ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ರಂಜನ್ ಇಂಡಿಯನ್ ಏಜೆನ್ಸಿ ಮಾಲಕಿ ಶಿವಾನಿ ಶಾಂತಾರಾಮ ಹೇಳಿದರು.

ಅವರು ತಮ್ಮ ಸ್ವಗ್ರಹದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಪಾದಯಾತ್ರೆಯ ಕುರಿತು ಮಾಹಿತಿ ನೀಡಿದರು.

‘ಇಂದಿನ ದಿನಮಾನದಲ್ಲಿ ಜನರು ನಡೆಯುವುದನ್ನೇ ಮರೆತಿದ್ದಾರೆ. ಹಾಗೂ ಆರೋಗ್ಯಕ್ಕೆ ಪಾದಯಾತ್ರೆ ಪೂರಕವಾಗಲಿದ್ದು, ೯ ವರ್ಷದ ಹಿಂದೆ ೧೦ ಮಂದಿಯಿAದ ಆರಂಭಗೊAಡ ಈ ಮಹಾಶಿವರಾತ್ರಿ ಪ್ರಯುಕ್ತದ ಪಾದಯಾತ್ರೆಯೂ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ವರ್ಷದಿಂದ ವರ್ಷಕ್ಕೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮುಖ್ಯವಾಗಿ ಚಿಕ್ಕಮಕ್ಕಳಲ್ಲಿ ಪಾದಯಾತ್ರೆಯಲ್ಲಿನ ಆಸಕ್ತಿ ಹೆಚ್ಚಾಗಿದೆ. ಜನರಲ್ಲಿ ನಡಿಗೆಯ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ.

ಪಾದಯಾತ್ರೆಯೂ ಫೆಬ್ರವರಿ ೨೧ ಶುಕ್ರವಾರದಂದು ಮುಂಜಾನೆ ೪ ಗಂಟೆಗೆ ಚೋಳೇಶ್ವರ ದೇವಸ್ಥಾನದಿಂದ ಆರಂಭಗೊAಡು ಅಲ್ಲಿಂದ ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ ಹೆದ್ದಾರಿ ಮಾರ್ಗವಾಗಿ ಬಸ್ತಿಯ ಮೂಲಕ ಮುರ್ಡೇಶ್ವರದ ದೇವಸ್ಥಾನಕ್ಕೆ ತಲುಪಲಿದ್ದೇವೆ. ಕಳೆದ ವರ್ಷ ೮೫೦ಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಈ ವರ್ಷ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುಖ್ಯವಾಗಿ ಪಾದಯಾತ್ರೆಯಲ್ಲಿ ಪ್ರತಿ ೪ ಕಿ.ಮೀ. ಭಕ್ತರಿಗೆ ಅನೂಕೂಲವಾಗುವಂತೆ ಪಾನೀಯ, ಫಲಾಹಾರ ವ್ಯವಸ್ಥೆಯ ಜೊತೆಗೆ ಅಂಬ್ಯುಲೆನ್ಸ ವ್ಯವಸ್ಥೆಯನ್ನು ಮಾಡಲಾಗಿದೆ. ಪಾದಯಾತ್ರೆಗೆ ಪೊಲೀಸ ಇಲಾಖೆಯಿಂದಲೂ ಸಹಕಾರ ಸಿಕ್ಕಿದ್ದು, ಎಲ್ಲರ ಸಹಕಾರವೂ ಅವಶ್ಯಕವಾಗಿದೆ.

ಪಾದಯಾತ್ರೆಯ ೯ ವರ್ಷವೂ ನಮ್ಮ ಜೊತೆಗಿದ್ದ ಸಾಲಗದ್ದೆ ಸ್ಪೋಟ್ಸ ಕ್ಲಬ್ ಕಾರ್ಯದರ್ಶಿ ಆನಂದ ಬಾಳಗಿ ಅವರು ಸಕ್ರಿಯರಾಗಿದ್ದರು. ಆದರೆ ಕಳೆದ ವರ್ಷ ಅಪಘಾತದಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಈ ವರ್ಷ ಅವರ ಅನುಪಸ್ಥಿತಿ ನಮಗೆ ಕಾಡುತ್ತಿರುವುದು ಬೇಸರವಾಗಿದೆ.
ಅವರಿಗಾಗಿ ಈ ವರ್ಷದ ಪಾದಯಾತ್ರೆಯ ಬಳಿಕ ದೇವರಲ್ಲಿ ಅವರ ಆರೋಗ್ಯ ಚೇತರಿಕೆಯಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದೇವೆ. ಶಿವನ ಅನುಗ್ರಹ ಎಲ್ಲರಿಗೂ ಸಿಗುವಂತಾಗಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.

error: