December 22, 2024

Bhavana Tv

Its Your Channel

ಭಟ್ಕಳ್ ನಾಮಧಾರಿ ಸಮಾಜದ ಭೀಷ್ಮರೆಂದೇ ಪ್ರಖ್ಯಾತರಾಗಿದ್ದ ಬಾಬು ಮಾಸ್ತರ್ ನಿಧನ

ನಾಮಧಾರಿ ಸಮಾಜದ ಹಿರಿಯರು ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ಧೇವಸ್ಥಾನದ ಮಾಜಿ ಅಧ್ಯಕ್ಷರು, ಹಾಗೂ ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಟ್ರಸ್ಟಿಯಾಗಿದ್ದ ಶ್ರೀಜೆ ಎನ್ ನಾಯ್ಕ,( ಬಾಬು ಮಾಸ್ತರು) (೮೪) ಅಸೌಖ್ಯದಿಂದ ತಮ್ಮ ಮುಂಡಳ್ಳಿ ಯ ಸ್ವಗೃಹದಲ್ಲಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಭಟ್ಕಳ ನಾಮಧಾರಿ ಸಮಾಜದ ಬೀಷ್ಮರೆಂದೇ ಪ್ರಖ್ಯಾತರಾಗಿದ್ದ ಇವರು ಸಾಮಾಜದ ಸಂಘಟನೆಯಲ್ಲಿ ಹಲವಾರು ಸೇವಾ ಸಂಸ್ಥೆಗಳಲ್ಲಿ , ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು, ಮ್ರತರು ಪತ್ನಿ,ಇಬ್ಬರು ಪುತ್ರರು ,ಐವರು ಪುತ್ರಿಯರು,ಸೇರಿದಂತೆ ಹಲವಾರು ಬಂಧುಬಳಗವನ್ನು ಅಗಲಿದ್ದಾರೆ, ಇವರ ನಿಧನಕ್ಕೆ , ನಾಮಧಾರಿ ಸಮಾಜದ ಗುರುಮಠ ಶ್ರೀ ನಿಚ್ಚಲಮಕ್ಕಿ ದೇವಸ್ಥಾನದ ಆಡಳಿತ ಮಂಡಳಿ ,ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಗುರುದೇವ ಮಠ ,ಭಟ್ಕಳ ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಶೋಕ ವ್ಯಕ್ತಪಡಿಸಿವೆ.

error: