December 21, 2024

Bhavana Tv

Its Your Channel

ಗುಂಡ್ಲುಪೇಟೆಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ, ಹ೦ಗಳ ಗ್ರಾಮದ ಹಿರಿಕೆರೆ ಕೊಡಿ ಬಿದ್ದು ರೈತರ ಮುಖದಲ್ಲಿ ಮಂದಹಾಸ

ಗುoಡ್ಲುಪೇಟೆ ; ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪಕ್ಕದಲ್ಲಿರುವ ಹಿರಿಕೆರೆ ಕೊಡಿ ಬಿದ್ದಿರುವುದು ಕಂಡುಬAದಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹ೦ಗಳ ಗ್ರಾಮದ ಹಿರಿಕೆರೆ ಯು ರಾತ್ರಿ ಬಿದ್ದ ಮಳೆಗೆ ಕೊಡು ಬಿದ್ದು ಹ೦ಗಳ ಗ್ರಾಮದ ದೊಡ್ಡಕೆರೆಗೆ ನೀರು ಹರಿದು ಬರುತ್ತಿರುವುದು ಸುಮಾರು ವರ್ಷಗಳು ಕಳೆದಿದ್ದರೂ ಸಹ ಕೋಡಿ ಬೀಳದ ಕೆರೆಗಳು ಈಗ ಸತತವಾಗಿ ಸುರಿಯುತ್ತಿರುವ ಜಡಿ ಮಳೆಗೆ ಕೆರೆಕಟ್ಟೆಗಳು ಎಲ್ಲಾ ತುಂಬಿ ತುಳುಕುತ್ತಿವೆ. ಹ೦ಗಳದ ದೊಡ್ಡ ಕೆರೆಗೆ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಹ೦ಗಳದ ಗ್ರಾಮಸ್ಥರು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: