ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ; ಗುಂಡ್ಲುಪೇಟೆ ಪಟ್ಟಣದ ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ ರವರು ತಮ್ಮ ನಿವಾಸದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದಾರೆ. ಅದರಂತೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಮಾಡುವ ಮುಖಾಂತರ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕರಾದ ಆರ್. ಸೋಮಣ್ಣ ಮತ್ತು ಕಾವಲುಪಡೆಯ ತಾಲೂಕು ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಅವರಿಂದ ಧ್ವಜಾರೋಹಣ ನಡೆಯಿತು.
ನಂತರ ಮಾತನಾಡಿದ ಬ್ರಹ್ಮಾನಂದ ಅವರು ನಾವು ಕಳೆದ ೩೯ ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಮನೆಯಲ್ಲೇ ಮಾಡಿಕೊಂಡು ಬಂದಿದ್ದೇವೆ. ಮತ್ತು ನಾನು ಮೂಲತಹ ವಾಟಾಳ್ ನಾಗರಾಜ ರವರ ಗರಡಿಯಲ್ಲಿ ಬೆಳೆದು ಬಂದವನು ಅವರ ಪ್ರೇರಣೆ ಈ ಮಟ್ಟಕ್ಕೆ ನಮ್ಮನ್ನು ತಂದಿದೆ. ೧೯೮೪ ರಲ್ಲಿ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, , ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವವನ್ನು ಹನ್ನೆರಡು ದಿನಗಳ ಕಾಲ ನಡೆಸಿಕೊಂಡು ಬಂದಿದ್ದೇವೆ, ಹಾಗಾಗಿ ತಾಯಿ ಭುವನೇಶ್ವರಿಯನ್ನು ಸ್ಮರಿಸುತ್ತಾ ಕನ್ನಡ ಸೇವೆಯನ್ನು ಮುಂದಿನ ದಿನಗಳಲ್ಲಿ ಮಾಡಲು ಹೆಚ್ಚಾಗಿ ನೀಡಲಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದರು. ಈ ಸುಸಂದರ್ಭದಲ್ಲಿ ಇಬ್ಬರು ಪೌರಕಾರ್ಮಿಕರಿಗೆ ಸನ್ಮಾನವನ್ನು ಮಾಡಲಾಯಿತು. ತಾಲೂಕು ಘಟಕದ ಕಾವಲುಪಡೆಯ ಸಂಘಟನೆಯ ಅಬ್ದುಲ್ ಮಾಲಿಕ್, ಮುಬಾರಕ್, ಇಲಿಯಾಸ್, ವೆಂಕಟೇಶ್ ಗೌಡ್ರು, ಸಾಧಿಕ್ ಪಾಶ, ಮಿಮಿಕ್ರಿ ರಾಜು, ಹಾಗೂ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆಯ ಅಶೋಕ್ ರಾಜ್, ಮುನೀರ್ ಪಾಷಾ, ಮಂಜುನಾಥ್ ,ಯೋಗೇಶ್, ಮಂಜು, ಶಿವು , ಇನ್ನು ಮುಂತಾದವರು ಹಾಜರಿದ್ದರು.
ವರದಿ ; ಸದಾನಂದ ಕನ್ನೆಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.