December 22, 2024

Bhavana Tv

Its Your Channel

ಕೋವಿಡ್ನಿಂದ ನಿಧನಗೊಂಡ ಕುಟುಂಬಕ್ಕೆ ಕಾವಲುಪಡೆಯ ಗುಂಡ್ಲುಪೇಟೆ ತಾಲೂಕು ಘಟಕದ ವತಿಯಿಂದ ಆಹಾರ ಕಿಟ್ ವಿತರಣೆ.

ಚಾಮರಾಜನಗರ; ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ೧೦ನೇ ವಾರ್ಡಿನ ನಿವಾಸಿಯಾದ ಬಾಬುರವರು ಕೋವಿಡ್ನಿಂದ ನಿಧನಗೊಂಡಿದ್ದು ಕುಟುಂಬದ ಸದಸ್ಯರು ಬಹಳ ಕಷ್ಟದಲ್ಲಿದ್ದು ಅವರಿಗೆ ಕಾವಲುಪಡೆಯ ಗುಂಡ್ಲುಪೇಟೆ ಘಟಕದ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು .ಈ ಸಂದರ್ಭದಲ್ಲಿ ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಅವರು ಮಾತನಾಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಯಳಂದೂರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಮಲ್ಲುರವರು ಮಾತನಾಡಿ ಕುಟುಂಬದ ಸದಸ್ಯರಿಗೆ ಕೆಲಸ ಕೊಡುವುದಾಗಿ ಭರವಸೆ ನೀಡಿದರು. ಕಾವಲುಪಡೆಯ ಜಿಲ್ಲಾಧ್ಯಕ್ಷರಾದ ಪರಶಿವಮೂರ್ತಿ ,ಜಿಲ್ಲಾ ಉಪಾಧ್ಯಕ್ಷರಾದ ಅಮೀರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಅಬ್ದುಲ್ ರಶೀದ್, ಗುಂಡ್ಲುಪೇಟೆ ಕಾವಲುಪಡೆಯ ಘಟಕದ ಅಧ್ಯಕ್ಷರಾದ ಅಬ್ದುಲ್ ಮಾಲಿಕ್, ಕಾರ್ಯಾಧ್ಯಕ್ಷರಾದ ಇಲಿಯಾಸ್ , ಮುಬಾರಕ್, ಸಾಧಿಕ್ ಪಾಷಾ ,ವೆಂಕಟೇಶ್ ಗೌಡ್ರು ,ಎಚ್ ರಾಜು ,ಮಿಮಿಕ್ರಿ ರಾಜು ,ಹಾಜರಿದ್ದರು
ವರದಿ : ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: