December 22, 2024

Bhavana Tv

Its Your Channel

ಟಿಪ್ಪರ್ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು ಸಂಬವಿಸಿದ ಘಟಣೆ ಗುಂಡ್ಲುಪೇಟೆ ತಾಲೂಕಿನಲ್ಲಿ ವರದಿಯಾಗಿದೆ.

ಗುಂಡ್ಲುಪೇಟೆ . ಬಿಳಿಕಲ್ಲು ತುಂಬಿಕೊAಡು ಹೋಗುತ್ತಿದ್ದ ಟಿಪ್ಪರ್ ಲಾರಿ ಹರಿದು ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಊಟಿ ರಸ್ತೆಯ ಬೆಟ್ಟದ ಮಾದಳ್ಳಿ ಗೇಟ್ ಹತ್ತಿರ ನಡೆದಿದೆ. ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಬಸಪ್ಪ 65 ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕಸ್ತೂರಿ ಕರ್ನಾಟಕ ನ್ಯಾಯಪರ ಸಂಘಟನೆತಾಲೂಕು ಘಟಕದ ಅಧ್ಯಕ್ಷರಾದ ರಂಗಪ್ಪ ಮತ್ತು ಸಂಘಟನೆಯವರು ಸ್ಥಳಕ್ಕೆ ಧಾವಿಸಿ ವೀಕ್ ಎಂಡ್ ಕರ್ಫ್ಯೂ ಇದ್ದರು ಟಿಪ್ಪರ್ ಗಳಿಗೆ ಅನುಮತಿ ಕೊಟ್ಟಿದ್ದಾರೆ. ಅಂದರೆ ಎಷ್ಟರಮಟ್ಟಿಗೆ ತಾಲೂಕು ಆಡಳಿತ ಜಿಲ್ಲಾ ಆಡಳಿತ ಕಣ್ಣು ಮುಚ್ಚಿ ಕೊಂಡು ಕುಳಿತಿದೆ ಎಂದು ಖಂಡಿಸಿದ್ದಾರೆ. ಮೃತವ್ಯಕ್ತಿ ಕುಟುಂಬಕ್ಕೆ ಪರಿಹಾರ ಸ್ಥಳದಲ್ಲೇ ಕೊಡಬೇಕು ಇಲ್ಲದಿದ್ದರೆ ನಾವು ಸ್ಥಳ ಬಿಟ್ಟು ಹೋಗುವುದಿಲ್ಲ ಎಂದು ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಈ ಸಂದರ್ಭದಲ್ಲಿ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಸಂಘಟನೆಯವರು ಮತ್ತು ಸ್ಥಳೀಯರು ಹಾಜರಿದ್ದರು.
ವರದಿ ; ಸದಾನಂದ ಕನ್ನೆಗಾಲ, ಗುಂಡ್ಲಪೇಟೆ

error: