March 29, 2025

Bhavana Tv

Its Your Channel

16ನೇ ತಾರೀಕು ನೀರಿಗಾಗಿ ಚಳುವಳಿ

ಗುಂಡ್ಲುಪೇಟೆ : ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಬೀರು ಬೇಸಿಗೆಯಲ್ಲಿ ಜನರಿಗೆ ನೀರಿಲ್ಲ ಮತ್ತು ಜಾನುವಾರುಗಳಿಗೆ ಮೇವಿಲ್ಲ ಜಿಲ್ಲಾ ರೈತ ಮುಖಂಡ ಹೊನ್ನೂರು ಪ್ರಕಾಶ್ ಆರೋಪ..

ಬೀರು ಬೇಸಿಗೆಯಲ್ಲಿ ಜನರಿಗೆ ನೀರಿಲ್ಲ ಮತ್ತು ಜಾನುವಾರುಗಳಿಗೆ ಮೇವಿಲ್ಲ ಹಾಗಾಗಿ ತಾಲೂಕಿನ ಅಧಿಕಾರಿಗಳನ್ನ ಕೇಳಿದರೆ ಲೋಕಸಭೆ ಚುನಾವಣೆ ಎಂದು ಸಭೂಬು ಹೇಳುತ್ತಿದ್ದಾರೆ ಎಂದು ಜಿಲ್ಲಾ ರೈತ ಮುಖಂಡ ಹೊನ್ನೂರು ಪ್ರಕಾಶ್ ಆರೋಪಿಸಿದ್ದಾರೆ.
ಗುಂಡ್ಲುಪೇಟೆ ನೀರಿನ ಆಹಾಕಾರ ಉಂಟಾಗಿದ್ದು. ಬಿರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಹೆಚ್ಚಾಗಿದ್ದು .ಮತ್ತು ಇಲಾಖೆಗಳ ಯಾವ ಒಬ್ಬಅಧಿಕಾರಿಗಳು ಕೂಡ ರೈತರಿಗೆ ಸ್ಪಂದಿಸದೆ ಚುನಾವಣೆ ಎಂದು ಸಬುಬು ಹೇಳುತ್ತಿದ್ದಾರೆ ಇದನ್ನು ಖಂಡಿಸಿ ಇದೆ 16ನೇ ತಾರೀಕು ಚಳುವಳಿಯನ್ನ ಹಮ್ಮಿಕೊಂಡಿದ್ದೇವೆ 16 ನೇ ತಾರೀಕು ತಾಲೂಕಿನ ಎಲ್ಲಾ ಅಧಿಕಾರಿಗಳು ಸ್ಥಳದಲ್ಲೇ ಇದ್ದು ನಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಬೇಕು ಒಂದು ವೇಳೆ ಆಗದಿದ್ದಲ್ಲಿ ಉಗ್ರವಾಗಿ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘದಿAದ ನಡೆಸಲಾಗುತ್ತದೆ ಎಂದು ಜಿಲ್ಲಾ ರೈತ ಮುಖಂಡ ಹೊನ್ನೂರು ಪ್ರಕಾಶ್ ರವರು ಈ ಮಾಧ್ಯಮದ ಮೂಲಕ ಮುನ್ನೆಚ್ಚರಿಕೆಯನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ರೈತ ಸಂಘದ ಮುಖಂಡರುಗಳು ರೈತರು ಇದ್ದರು.
ವರದಿ : ಸದಾನಂದ ಕಣ್ಣೆಗಲ ಗುಂಡ್ಲಪೇಟೆ

error: