ವಿಜಯಪೂರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾವಪೂರ್ಣ ನುಡಿನಮನ ಕಾರ್ಯಕ್ರಮವನ್ನು ಜರುಗಿತು. ಕೊರೋನಾ ಕಾಲದಲ್ಲಿ ನಾಡಿನ ಖ್ಯಾತ ಸಾಹಿತಿ ಡಾ ಸಿದ್ದಲಿಂಗಯ್ಯ ಹಾಗೂ ಇಂಡಿ ತಾಲೂಕಿನ ಹಿರಿಯ ಸಾಹಿತಿ ದಾನಪ್ಪ ಬಗಲಿ ಯವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಕಸಾಪ ಅಧ್ಯಕ್ಷ ಡಾ ಕಾಂತು ಇಂಡಿ ಮಾತನಾಡಿದರು. ಎಸ್ ಎಸ್ ಸ್ವಾಮಿ ಯವರು ಮಾತನಾಡುತ್ತಾ ದಾನಪ್ಪ ಬಗಲಿ ಯವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ವಿಶೇಷವಾಗಿ ಆಧುನಿಕ ವಚನ ಸಾಹಿತ್ಯಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಹೇಳಿದರು. ಎಮ್.ಪಿ.ಭೈರಜಿ ಮಾತನಾಡಿ ದಾನಪ್ಪ ಬಗಲಿ ಯವರು ಕುವೇಂಪು ಅವರ ಚಿತಾಭಸ್ಮವನ್ನು ತಮ್ಮ ಮನೆಯಲ್ಲಿ ನಿತ್ಯ ಪೂಜೆಗೈಯುವ ಸಾಹಿತ್ಯ ಆರಾದಕರಾಗಿದ್ದರು. ಅವರು ನಮ್ಮನ್ನು ಬಿಟ್ಟು ಅಗಲಿದರು ಕೂಡಾ ಅವರು ರಚಿಸಿದ ಸಾಹಿತ್ಯ ಅಜರಾಮರವಾಗಿದ್ದು ಎಂದರು. ರಾಘವೇಂದ್ರ ಕುಲಕರ್ಣಿ ಮಾತನಾಡಿ ದಾನಪ್ಪ ಬಗಲಿಯವರ ಬರಹ ಹಾಗೂ ಬದುಕು ಒಂದೆ ರೀತಿ ಇತ್ತು ಎಂದು ಮಾತನಾಡಿದರು.
ಪಾರ್ವತಿ ಸೊನ್ನದ ಮಾತನಾಡುತ್ತಾ ಭಾವುಕರಾಗಿ ನಮ್ಮಂತ ಉದಯೋನ್ಮುಖ ಕವಿಗಳಿಗೆ ಮಾರ್ಗದರ್ಶಿಗಳಾಗಿದ್ದರು, ಬಗಲಿ ಯವರ ಅಗಲಿಕೆಯಿಂದ ನಮ್ಮಂತ ಉದಯೋನ್ಮುಖ ಕವಿಗಳಿಗೆ ತುಂಬಲಾರದ ನಷ್ಟ ಸಂಭವಿಸಿದೆ ಎಂದರು. ನಿಜಣ್ಣಾ ಕಳೆಯವರು ಮಾತನಾಡುತ್ತಾ ದಾನಪ್ಪ ಬಗಲಿ ಹಾಗೂ ಸಿದ್ದಲಿಂಗಯ್ಯ ನವರ ಅಗಲಿಕೆಯ ನಷ್ಟ ಭರಿಸಲು ಸಾಧ್ಯವಿಲ್ಲ ಎಂದರು.ಕಾರ್ಯಕಮದ ಅಧ್ಯಕ್ಷತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ರಾಠೋಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ ಜಿ ಬರಡೋಲ, ಸಿದ್ದು ಡಂಗಾ.ಆರ್ ವಿ ಪಾಟೀಲ, ರಾಜು ಕುಲಕರ್ಣಿ, ಎಸ್ ಎ.ಸುಗುರ.ಸಂಜು ತೇಲೂರ.ಬಸಯ್ಯ ಹಿರೇಮಠ ಪ್ರಕಾಶ ಬಿರಾದಾರ, ಸಂದೇಶ ಗಲಗಲಿ ಉಪಸ್ಥಿತರಿದ್ದರು, ಬಸವರಾಜ ಗೋರನಾಳ ನಿರೂಪಿಸಿ ವಂದಿಸಿದರು
ವರದಿ: ಬಿ ಎಸ್ ಹೊಸೂರ.ಇಂಡಿ
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.