December 22, 2024

Bhavana Tv

Its Your Channel

ಭಟ್ಕಳ ತಾಲೂಕಾ ಪಂಚಾಯತ ಎದುರು ಬೀಕರ ಅಪಘಾತ:ಆಕ್ಟಿವಾ ಸವಾರನ ತಲೆ ಛಿದ್ರ ಛಿದ್ರ

ಭಟ್ಕಳ: ಭಟ್ಕಳ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ತಾಲ್ಲೂಕು ಪಂಚಾಯತ್ ಕಚೇರಿ ಬಳಿ ಆಕ್ಟಿವಾ ಬೈಕ ಯೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ
44 ವರ್ಷದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಮೃತ ವ್ಯಕ್ತಿ ಅಬ್ದುಲ್ ಖಾದಿರ ಇಸ್ತಿಯಾಕ್ ಭಟ್ಕಳ ಮದೀನಾ ಕಾಲೋನಿ ನಿವಾಸಿ ಎಂದು ಗುರುತಿಸಲಾಗಿದೆ.
ಅಪಘಾತ ರಭಸಕ್ಕೆ ಲಾರಿ ಚಕ್ರ ಆಕ್ಟೀವಾ ಬೈಕ್ ಸವಾರನ ತಲೆಯ ಮೇಲೆ ಹರಿದು ಹೋಗಿರುವುದರಿಂದ ತಲೆ ಭಾಗ ಛಿದ್ರ ಛಿದ್ರವಾಗಿದ್ದು,ಗುರುತು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿ ರಸ್ತೆ ಮೇಲೆ ಶವ ಬಿದ್ದಿದೆ.ಅಪಘಾತದ ವೇಳೆ ಆಕ್ಟಿವಾ ಬೈಕ್ ಸವಾರನು ಹೆಲ್ಮೆಟ್ ಧರಿಸಿದ್ದರು ಹೆಲ್ಮೆಟ್ ಪುಡಿ ಪುಡಿಯಾಗಿದೆ.ಅಪಘಾತ ಸಂಭವಿಸಿದ ಕೊಡಲೇ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಸ್ಥಳದಲ್ಲಿ ನೂರಾರು ಜನರು ಜಮ್ಮ ಗೊಂಡು ಪೋಲಿಸರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಾಯಯ ಶವವನ್ನು ಭಟ್ಕಳ ಸರರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.ಈ ಬಗ್ಗೆ ಭಟ್ಕಳ ನಗರ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

error: