ಭಟ್ಕಳ ತಾಲೂಕಿನಾದ್ಯಂತ ಬಣ್ಣಗಳ ಹಬ್ಬವಾದ ಹೋಳಿ ಹಬ್ಬವನ್ನು ಮಂಗಳವಾರ ದಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ತಾಲೂಕಿನ ಬಂದರಿನಲ್ಲಿರುವ ಖಾರ್ವಿ ಸಮುದಾಯದ ಹೋಳಿ ಹಬ್ಬಕ್ಕೆ ತನ್ನದೇ ವೈಶಿಷ್ಟ್ಯಯಿದ್ದು, ಇವರ ಓಕೋಳಿಯಾಟವನ್ನು ಕಾಣಲು ಜನ ಗುಂಪುಪಾಗಿ ಸೇರುವುದೂ ಒಂದು ವಿಶೇಷ ಎನ್ನಬಹುದು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಖಾರ್ವಿ ಸಮುದಾಯವು ಹೋಳಿ ಹಬ್ಬವನ್ನು ಅತ್ಯಂತ ವಿಶಿಷ್ಠವಾಗಿ ಐದು ದಿನಗಳ ಕಾಲ ಆಚರಿಸಿದ್ದು, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ತಮ್ಮ ಸೀಮಿತವನ್ನು ಕಾಯ್ದುಕೊಂಡು ಹೋಳಿ ಆಚರಿಸಿದ್ದಾರೆ.
ಈ ಖಾರ್ವಿ ಸಮಾಜದವರು ವಿಶಿಷ್ಠ ರೀತಿಯಲ್ಲಿ ಹೋಳಿಯನ್ನು ಆಚರಿಸಲಿದ್ದು, ಜಿಲ್ಲೆಯಲ್ಲಿಯೇ ವಿಶಿಷ್ಠತೆಯನ್ನು ಹೊಂದಿದೆ. ಪ್ರತೀ ವರ್ಷವೂ ಖಾರ್ವಿ ಸಮಾಜದ ಒಂದು ಕುಟುಂಬದವರು ಹರಕೆಯನ್ನು ಹೊರಲಿದ್ದು, ಹರಕೆಯ ನಿಯಮದಂತೆ ಅವರ ಮನೆಯಿಂದ ಒಂದು ಅಡಿಕೆ ಮರವನ್ನ ಹಬ್ಬದ ದಿನದಂದು ಸಮಾಜದವರೆಲ್ಲರೂ ಸೇರಿ ವಾದ್ಯಗಳೊಂದಿಗೆ ಕುಣಿತಗಳನ್ನು ಹಾಕುತ್ತಾ ಅಡಿಕೆಮರವನ್ನ ಹಾರಿಸುತ್ತಾ ಮೆರವಣಿಗೆಯ ಮೂಲಕ ಬಂದರ್ ಕಡಲತೀರಕ್ಕೆ ತಂದು ಮೆರವಣಿಗೆಯಲ್ಲಿ ವಿಜೃಂಭಣೆಯಿAದ ಜೈಕಾರ ಹಾಕುತ್ತಾ ಸಾಗುವುದು ಆಕರ್ಷಣೀಯವಾಗಿತ್ತು. ಈ ಮಧ್ಯೆ ವೇಷಧಾರಿಗಳು ಮೆರವಣಿಗೆಯನ್ನು ಆಕರ್ಷಿಸುದುಂಟು. ಮಹಿಳೆಯರು, ಪುರುಷರು ಎನ್ನದೇ ಎಲ್ಲರೂ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು. ತದನಂತರ ಮೆರವಣಿಗೆಯೂ ಬಂದರ್ ಸಮುದ್ರ ತೀರದತ್ತ ಬಂದು ಅಲ್ಲಿ ಹೊಂಡವನ್ನು ತೋಡಿ ಅಡಿಕೆಮರ ನೆಟ್ಟು ಕಾಮದಹನ ಮಾಡಿ ಆ ಮೂಲಕ ಸಂಪ್ರದಾಯದ ಹೋಳಿಯ ಆಚರಣೆ ನಡೆಯಿತು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.