December 22, 2024

Bhavana Tv

Its Your Channel

ಭಟ್ಕಳ:ಒಂಬತ್ತಕ್ಕೆ ಏರಿದ ಸೋಂಕಿತರ ಸಂಖ್ಯೆ,

ಭಟ್ಕಳ: ದುಬೈನಿಂದ ಪಟ್ಟಣಕ್ಕೆ ಬಂದಿದ್ದ ಇನ್ನೋರ್ವ ಯುವಕನಲ್ಲೂ ಕೋವಿಡ್- 19 ಇರುವುದು ಇಂದು ದೃಢಪಟ್ಟಿದೆ.

ಈ ಮೊದಲು ದೃಢಪಟ್ಟಿದ್ದ ಭಟ್ಕಳ ಮೂಲದ 22 ವರ್ಷದ ಸೋಂಕಿತ ಯುವಕನ (ಸೋಂಕಿತ ಸಂಖ್ಯೆ: 62) ಸಹೋದರನಾಗಿರುವ ಈತ, ಜತೆಯಾಗಿ ಇಬ್ಬರೂ ಗೋವಾದ ದಾಬೋಲಿಯಮ್ ವಿಮಾನ ನಿಲ್ದಾಣದಿಂದ ಕಾರವಾರದ ಮೂಲಕ ಭಟ್ಕಳಕ್ಕೆ ಬಂದಿದ್ದರು.

26 ವರ್ಷ ವಯಸ್ಸಿನ ಈತ, ದುಬೈನಿಂದ 20ರಂದು ಸೋಂಕಿತ ಸಹೋದರನೊಂದಿಗೆ (ಸೋಂಕಿತ ಸಂಖ್ಯೆ: 62) ಗೋವಾ ದಾಬೋಲಿಯಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಅಲ್ಲಿಂದ ಸಹೋದರನ ಜೊತೆಯಲ್ಲಿ ಹಾಗೂ ಓರ್ವ ಮಹಿಳೆ ಸೇರಿದಂತೆ ಇನ್ನಿತರ ಮೂವರು ಕೂಡ ಈ ವೇಳೆ ಈ ಇಬ್ಬರೂ ಸೋಂಕಿತರ ಜೊತೆ ಇದ್ದರು. ಈ ಐವರೂ ಕಾರವಾರದ ರತ್ನಾ ಸಾಗರ್ ಹೋಟೆಲ್ ನಲ್ಲಿ ಉಪಹಾರ ಸೇವಿಸಿ, ಕಾರಿನಲ್ಲಿ ಭಟ್ಕಳಕ್ಕೆ ತೆರಳಿದ್ದರು. ಇಂದು ದೃಢಪಟ್ಟ ಯುವಕನು ಸಹೋದರನೊಂದಿಗೆ ಸಂಪರ್ಕ ಹೊಂದಿದ್ದನೆಂದು ಮುರುಡೇಶ್ವರದ ಆರ್ಎನ್ಎಸ್ ನಲ್ಲಿ ಪ್ರತ್ಯೇಕಿಸಿಡಲಾಗಿತ್ತು. ಅನುಮಾನದ ಮೇಲೆ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅದರ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಆ ಮೂಲಕ ಭಟ್ಕಳ ಮೂಲದ ಒಟ್ಟು ಒಂಬತ್ತು (8+1 ಮಂಗಳೂರಿನಲ್ಲಿರುವಾತ) ಮಂದಿಯಲ್ಲಿ ಕೋವಿಡ್- 19 ಸೋಂಕು ಇರುವುದು ದೃಢಪಟ್ಟಿದೆ.

error: