December 22, 2024

Bhavana Tv

Its Your Channel

ಕೊರೋನಾ ಆತಂಕ ಹಿನ್ನಲೆ: ಭಟ್ಕಳದಲ್ಲಿ ಔಷಧಿ ಸಿಂಪಡಣೆ

ಭಟ್ಕಳ: ತಾಲೂಕಿನ ೧೨ ಜನಕ್ಕೆ ಇಂದು ಒಂದೇ ದಿನ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಭಾಗದಲ್ಲಿ ಔಷಧಿ ಸಿಂಪಡಣೆ ಮಾಡಲಾಯಿತು.

ಪಟ್ಟಣದ ೧೮ ವರ್ಷದ ಯುವತಿಗೆ ಕೊರೋನಾ ಸೋಂಕು ಕಳೆದ ಮೂರು ದಿನದ ಹಿಂದೆ ದೃಢಪಟ್ಟಿತ್ತು. ಆಕೆಯ ಸಂಪರ್ಕದಲ್ಲಿದ್ದ ೧೨ ಜನಕ್ಕೆ ಇಂದು ಕೊರೋನಾ ದೃಢಪಟ್ಟಿದ್ದು ವಿಷಯ ಹೊರಬರುತ್ತಿದ್ದಂತೆ ಪಟ್ಟಣದಲ್ಲಿ ವೈರಸ್ ಹರಡದಂತೆ ಸೋಡಿಹಂ ಹೈಫೋ ಕ್ಲೋರೈಡ್ ಔಷಧಿ ಸಿಂಪಡಣೆ ಮಾಡಲಾಗಿದೆ.

ಪಟ್ಟಣದ ಮದೀನಾ ಕಾಲೋನಿಯ ನೂರು ಮೀಟರ್ ವ್ಯಾಪ್ತಿಯ ರಸ್ತೆಗಳಲ್ಲಿ, ಗುಡ್ ಲಕ್ ರಸ್ತೆ, ಹಾಗೂ ಕೋಕ್ತಿ ನಗರದಲ್ಲಿ ಔಷಧಿ ಸಿಂಪಡಣೆಯನ್ನ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಮಾಡಲಾಯಿತು.

ಇದಲ್ಲದೇ ಕೊರೋನಾ ಸೋಂಕು ದೃಢಪಟ್ಟವರ ಹದಿನೈದು ಮನೆಗಳಲ್ಲಿ ಜಾಲಿ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಔಷಧಿ ಸಿಂಪಡಣೆ ಮಾಡುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ.

ಭಟ್ಕಳ ತಹಶೀಲ್ದಾರ್ ಎಸ್ ರವಿಚಂದ್ರ ರವರ ಮಾರ್ಗದರ್ಶನದಲ್ಲಿ, ಮುಖ್ಯಾಧಿಕಾರಿಗಳಾದ ದೇವರಾಜ್, ವೇಣುಗೋಪಾಲ್ ಶಾಸ್ತ್ರಿ, ಆರೋಗ್ಯ ನಿರೀಕ್ಷಕರಾದ ಅಜಯ್ ಭಂಡಾರಕರ್ ಹಾಗೂ ವಿನಾಯಕ್ ಈ ಔಷಧಿ ಸಿಂಪಡಣೆ ಕಾರ್ಯದ ನೇತೃತ್ವ ವಹಿಸಿದ್ದಾರೆ.

error: